ಭೀಮಾತೀರದ ಜನರ ಮಾತುಕಠೋರವಾಗಿದ್ದರೂ ಹೃದಯಶ್ರೀಮಂತರು: ಶಾಸಕ ಯಶವಂತರಾಯಗೌಡ

ಇಂಡಿ:ಆ.28:ಭೀಮಾತೀರದ ಜನರು ಭೀಮಬಲ ಹೊಂದಿದ ಹೃದಯವಂತಿಗೆ ಜನರಿದ್ದಾರೆ,ಈ ಭಾಗದ ಜನರ ಮಾತು ಕಠೋರವಾದರೂ ಹೃದಯ ಶ್ರೀಮಂತಿಕೆಯವರಾಗಿದ್ದಾರೆ ಎಂದು
ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಹಮ್ಮಿಕೊಂಡ ಭೀಮಾಂತರಂಗ ಆನ್‍ಲೈನ್ ಸಾಹಿತಿಕ ಸಾಂಸ್ಕøತಿಕ ಜಗಲಿ ಕೇಂದ್ರ ಇಂಡಿ 2021ರಲ್ಲಿ ನಡೇದ ಆನ್‍ಲೈನ್ ಪನ್ಯಾಸಗಳ ಲೇಖನಗಳ ಹೋತ್ತಗೆ ಭೀಮಾಂತರಂಗ ಉಪನ್ಯಾಸ ಮಾಲಿಕೆ-01 ಕೃತಿ ಲೋಕಾರ್ಪಣೆಗೋಳಿಸಿ ಮಾನಾಡಿದ ಅವರು ಪ್ರತಿಯೋಬ್ಬರಿಗೂ ತನ್ನ ಭಾಷೆ,ನಾಡು,ನುಡಿ ಗೌರವ ಇರಬೇಕು. ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಇಂಡಿ,ಸಿಂದಗಿ ಇದ್ದರೂ ಕೂಡಾ ಇಲ್ಲಿನ ಜನರು ತಾಯ್ನಾಡಿನ ಏಕೈಕ ಭಾಷೆ ಕನ್ನಡ ಕೆಚ್ಚು ಮಾಸಿಲ್ಲ. ಭೀಮೆಯ ಒಡಲಿಲ್ಲಿ ಅನೇಕ ಸಾಹಿತಗಳು ಶರಣರು,ದಾರ್ಶನಿಕರು ಸಂತ ಮಹಾಂತರು ಈ ಭಾಗದ ಜನರಿಗೆ ಸಂಸ್ಕಾರ ನೀಡಿದ್ದಾರೆ. ಒಂದು ಕಡೆ ಬರಗಾಲ ಹಾಗೂ ನೈಸರ್ಗಿಕ ವಿಕೋಪ, ಅತೀವೃಷ್ಠಿ ಅನಾವೃಷ್ಠಿ ಇದ್ದರೂ ಜನರು ಧೃತಿಗೆಡದೆ ಸಾಹಿತಿಕ ,ಅಧ್ಯಾತ್ಮಿಕ ಕ್ಷೇತ್ರದಲ್ಲಿ ಶ್ರೀಮಂತಿಕೆಯಿಂದ ಕೂಡಿದೆ.
ರಾಜ್ಯ ಸೇರಿದಂತೆ ಇತರೆ ಭಾಗಗಳಲ್ಲಿ ಲಿಪಿ ಇಲ್ಲದ ಭಾಷೆಗಳು ಮಾತನಾಡುತ್ತಾರೆ. ಇಂತಹ ವರ್ಗದ ಜನರಿಗೆ ನಿಮ್ಮಂತಹ ಸಾಹಿತಿಗಳು ಬುದ್ದಿಜೀವಿಗಳು ಬುಡಗಟ್ಟು ಜನಾಂಗದ ಭಾಷೆಗಳಿಗೆ ಲಿಪಿ ಕೊಡುವಲ್ಲಿ ಶ್ರಮಿಸಬೇಕು.
ಸಾಹಿತ್ಯೆಗಳು ಈ ಭಾಗದ ಜ್ವಲಂತ ಸಮಸ್ಯಗಳು, ಅಧ್ಯಾತ್ಮಿಕ,ಧಾರ್ಮಿಕ, ಜನರ ಸಂಸ್ಕಾರಯುತ ಬದುಕುಗಳ ಮೇಲೆ ಬೆಳಕು ಚೆಲ್ಲಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಇಂಚಗೇರಿ ಮಠ ಪ್ರಮುಖ ಪಾತ್ರವಹಿಸಿದೆ. ಸರಕಾರಗಳು ಇಂತಹ ಮಠ ,ಮಾನ್ಯಗಳನ್ನು ಗುರುತಿಸಬೇಕು. ಅಧುನಿಕ ಭರಾಟೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮಾನವೀಯ ಮೌಲ್ಯಗಳು ಕಡಿಮೆಯಾಗಿವೆ. ಸಾಹಿತ್ಯೆದ ಮೂಲಕ ಹೊಸಬದುಕು ಕಟ್ಟುವಂತೆ ಸಾಹಿತ್ಯ ರಚನೆ ಮಾಡಿ ಇಂತಹ ಸಾಹಿತಿಕ ಚಟುವಟಿಕೆಗಳಿಗೆ ಸದಾ ನಿಮ್ಮ ಜೊತೆ ಇರುವುದಾಗಿ ಭರವಸೆ ನೀಡಿದರು.

ಭೀಮಾತೀರಕ್ಕೆ ಐತಿಹಾಸಿಕ ನೆಲೆ ಇದೆ. ಭೀಮಾತಟದಲ್ಲಿ ಲಚ್ಯಾಣದ ಶ್ರೀಸಿದ್ದಲಿಂಗ ಮಹಾರಾಜರು ,ಭಂಥನಾಳದ ಶ್ರೀಸಂಗನಬಸವ ಶ್ರೀಗಳು ನೆಲೆಸಿದ್ದಾರೆ. ಈ ಭಾಗದಲ್ಲಿ ಸಾಹಿತಿಕವಾಗಿ ಮಧುರ ಚೆನ್ನರು, ಸಿಂಪಿಲಿಂಗಣ್ಣ, ಧೂಲಸಾಹೇಬ, ಶ್ರೀರಂಗರು ಕನ್ನಡ ನಾಡಿಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಒಬ್ಬ ಸಾಹಿತಿ ಭಾಷೆ, ಪ್ರಾದೇಶಿಕ ಗಡಿಗಳನ್ನು ಮೀರಿ ಬೆಳೆಯಬೇಕು. ಸಾಹಿತ್ಯ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಸಾಹಿತಿಗಳು ಶ್ರಮಿಸಬೇಕು .ಲೇಖಕರಿಗೆ ಸ್ವಾಭಿಮಾನ ಇರಬೇಕು ದುರಾಭಿಮಾನ ಇರಬಾರದು ಪ್ರೀತಿಸುವ , ಕ್ಷಮಿಸುವ ಗುಣ ಇರಬೇಕೆಂದು ಕಲಬುರ್ಗಿ ಕೇಂದ್ರಿಯ ವಿಶ್ವವಿಧ್ಯಾಲಯದ ಕುಲಸಚಿವ ಪ್ರೋ, ಬಸವರಾಜ ಡೋಣೂರ ಹೇಳಿದರು.

ಬಾಕ್ಸ: ಭೀಮಾತೀರ ಎಂಬುದು ಮಾಧ್ಯಮಗಳ ಸೃಷ್ಠಿ, ಮಹಾತಪಸ್ವೀಗಳ ನಾಡು ಸಾಹಿತಿಗಳ ಬೀಡು . ಅನೇಕ ಒಳ್ಳೆಯ ಸಂಸ್ಕಾರುಳ್ಳ ರಾಜಕಾರಣಿಗಳು ನಮ್ಮ ಮಧ್ಯ ಇದ್ದಾರೆ. ಇಂಡಿ ಮಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಸಾಧು, ಸಂತ, ಮಹಾಂತರನ್ನು ಕಂಡು ಮುಗಿದ ಕೈ ಪೂಜ್ಯನಿಯ ಗುಣ,ಬಡವರನ್ನು ದೀನ ದುರ್ಬಲರನ್ನು ಕಂಡಾಗ ಕರಣೆಯಿಂದ ಕರೆಯುವ ಉದಾರ ಗುಣ ಅವರಲ್ಲಿದೆ.
ಆಲಮೇಲ ವೀರಕ್ತಮಠದ ಪೂಜ್ಯ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು.

ಡಾ. ಎಸ್ .ಕೆ ಕೋಪ್ಪಾ, ಸಂಶೋಧಕ ಡಿ.ಎನ್ ಅಕ್ಕಿ, ಸಾಹಿತಿ ಗೀತಯೋಗಿ ಮಾತನಾಡಿದರು.
ಶಿಕ್ಷಣಾಧಿಕಾರಿ ವಸಂತ ರಾಠೋಡ, ಸಂತೋಷ ಬಂಡೆ, ಶ್ರೀಧರ ಹಿಪ್ಪರಗಿ, ಪುಂಡಲಿಕ ಸಣ್ಣಾರ, ಬಿ.ಎಂ ಕಿರಣಗಿ, ಆಯ್.ಸಿ ಕಂಬಾರ, ಖಾಜು ಸಿಂಗೆಗೋಳ, ಉಮೇಶ ಕೊಳೆಕರ್ ಉಪಸ್ಥಿತರಿದ್ದರು.
ಸಾಹಿತಿ ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿ, ಸಿ.ಎಂ ಬಂಡಗಾರ ಪ್ರಾಸ್ತಾವಿಕ ಮಾತನಾಡಿ,ಶಿಕ್ಷಕ ವಾಯ್.ಜಿ ಬಿರಾದಾರ ಕಾರ್ಯಕ್ರಮ ನಿರೂಪಿದರು.