ಭೀಮಸಮುದ್ರ ಗ್ರಾಮದಲ್ಲಿ 100 ಕೋಟಿ ಲಸಿಕಾ ಸಾಧನಾ ಸಂಭ್ರಮಾಚರಣೆ

 ಚಿತ್ರದುರ್ಗ.ಅ.೨೭; ಭಾರತೀಯ ಜನತಾ ಪಾರ್ಟಿ,  ಗ್ರಾಮಾಂತರ ಮಂಡಲ, ಮಹಿಳಾ ಮೋರ್ಚಾ ವತಿಯಿಂದ ಭೀಮಸಮುದ್ರ ಗ್ರಾಮದಲ್ಲಿ ನೂರು ಕೋಟಿ ಲಸಿಕೆ ಸಾಧನೆ ಸಂಭ್ರಮಾಚರಣೆಯನ್ನು ಭೀಮಸಮುದ್ರ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬಿ.ಜೆ.ಪಿ. ಮುಖಂಡರಾದ ಜಿ.ಎಸ್. ಅನಿತ್ ಕುಮಾರ್ ರವರು ಮಾತನಾಡಿ ಕೋವಿಡ್ 19 ಮೊದಲನೇ ಮತ್ತು ಎರಡನೇಯ ಅಲೆಯ ಸಂದರ್ಭದಲ್ಲಿ ವೈಧ್ಯರು, ಶುಶ್ರೂಕ್ಷಕಿಯರು, ಆರೋಗ್ಯ ಸಹಾಕಯರು, ಆಶಾ ಕಾರ್ಯಕರ್ತರು ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂಧಿ ಬಹಳ ಶ್ರಮವಹಿಸಿ ಕೆಲಸ ನಿರ್ವಸಿದ್ದಾರೆ. ಅವರ ಶ್ರಮದಿಂದಾಗಿಯೇ ಇಂದು ದೇಶದಲ್ಲಿ 100 ಕೋಟಿ ಲಸಿಕೆ ನೀಡಲು ಸಾಧ್ಯವಾಗಿದೆ. ಅವರ ಸೇವೆ ಶ್ಲಾಘನೀಯ ಎಂದು ಅನಿತ್ ಕುಮಾರ್ ರವರು ತಿಳಿಸಿದರು. ಬಿ.ಜೆ.ಪಿ. ಲಸಿಕಾ ಅಭಿಯಾನದ ಸಂಚಾಲಕರಾದ ಡಾ. ಸಿದ್ಧಾರ್ಥ್ ಗುಂಡಾರ್ಪಿ ರವರು ಮಾತನಾಡಿ ವಿಶ್ವದಲ್ಲೇ ಭಾರತ ಕೇವಲ 9 ತಿಂಗಲ್ಲಿಯೇ 100ಕೋಟಿಗೂ ಅಧಿಕ ಲಸಿಕೆ ನೀಡುವಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಹೆಮ್ಮೆ ಪಡುವ ವಿಷಯವೇನೆಂದರೆ ಬೇರೆ ಯಾವುದೇ ದೇಶದ ಲಸಿಕೆಗೆ ಅವಲಂಭಿತರಾಗದೆ ಪ್ರಧಾನಿಯವರ ಕರೆಯಂತೆ ದೇಶದ ವಿಜ್ಞಾನಿಗಳು ತಮ್ಮ ಜ್ಞಾನ ಮತ್ತು ಪರಿಶ್ರಮವನ್ನು ಹಾಕಿ ಯಶಸ್ವಿಯಾದ ಕೋವಿಡ್ 19ರ ಲಸಿಕೆಯನ್ನು ಕಂಡುಹಿಡಿದಿದ್ದಾರೆ. ಅವರಿಗೆ ಬೆಂಬಲವಾಗಿ ಆರೋಗ್ಯ ಸಿಬ್ಬಂಧಿಗಳು ಯೋಧರ ಮಾದರಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭೀಮಸಮುದ್ರ ಆರೋಗ್ಯ ಕೇಂದ್ರ ವೈಧ್ಯರಾದ ಡಾ. ಸಾಧಿಕ್, ಶೂಶ್ರಷಕಿಯರು, ಆಶಾ ಕಾರ್ಯತೆಯರಿಗೆ, ಆರೋಗ್ಯ ಸಿಬ್ಬಂಧಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ.ಟಿ. ಸುರೇಶ್, ಗ್ರಾ.ಪಂ. ಅಧ್ಯಕ್ಷರಾದ ಪಾರ್ವತಮ್ಮ, ಉಪಾಧ್ಯಕ್ಷರಾದ ಶರತ್ ಪಾಟೀಲ್, ವಿ.ಎಸ್.ಎಸ್. ಅಧ್ಯಕ್ಷರಾದ ಅಶೋಕ್, ಗ್ರಾ.ಪಂ. ಸದಸ್ಯರಾದ ರಮೇಶ್, ಕಾವ್ಯ, ಪಾಲಾಕ್ಷಮ್ಮ ಸಿಂಧೂರಿ, ಪ್ರಕಾಶ್, ನಾಗರಾಜಪ್ಪ, ಗ್ರಾಮಾಂತರ ಬಿ.ಜೆ.ಪಿ.ಮಹಿಳಾಮೋರ್ಚಾ ಅಧ್ಯಕ್ಷರಾದ ವೀಣಾ ಮತ್ತಿತರು ಉಪಸ್ಥಿತರಿದ್ದರು.