ಭೀಮರಥ ಶಾಂತಿ ಕಾರ್ಯಕ್ರಮ


ಹೊನ್ನಾಳಿ.ನ.೬; ದ್ವಿತೀಯ ಮಂತ್ರಾಲಯ ಖ್ಯಾತಿಯ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕೂಡಲಿ ಶ್ರೀ ರಘುವಿಜಯ ತೀರ್ಥ ಮಹಾಸ್ವಾಮೀಜಿ ೭೦ನೇ ವರ್ಧಂತಿ ಅಂಗವಾಗಿ ಭೀಮರಥ ಶಾಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೂಡಲಿ ಆರ್ಯ ಅಕ್ಷೆಭ್ಯ ತೀರ್ಥ ಮಠದ ಶ್ರೀ ರಘುವಿಜಯ ತೀರ್ಥ ಮಹಾಸ್ವಾಮೀಜಿ ಪೂರ್ಣಾಹುತಿ ಸಂದರ್ಭದಲ್ಲಿ ಹಾಜರಿದ್ದರು. ನಂತರ ಶ್ರೀಗಳಿಗೆ ವಿದ್ವಾಂಸರು ಪವಿತ್ರ ಜಲದಿಂದ ಕಲಶಾಭಿಷೇಕ ನೆರವೇರಿಸಿದರು. ಶ್ರೀಗಳಿಂದ ಸಂಸ್ಥಾನ ಪೂಜೆ ನೆರವೇರಿತು. ಕೂಡಲಿ ಆರ್ಯ ಅಕ್ಷೆಭ್ಯ ತೀರ್ಥ ಮಠದ ದಿವಾನರಾದ ಕೂಡಲಿ ಶ್ರೀಧರಾಚಾರ್ಯ ಉಪಸ್ಥಿತರಿದ್ದರು. ಮಾರ್ಕಾಂಡೇಯ, ಮೃತ್ಯುಂಜಯ, ಸಾಧನಾ ಕಾಮ್ಯಾರ್ಥ ಇಷ್ಟಿ ಹೋಮಗಳು ರಾಯರ ಮಠದಲ್ಲಿ ನಡೆದವು. ಅಗ್ನಿಹೋತ್ರಿಗಳಾದ ಕಲ್ಲಾಪುರ ಜಯತೀರ್ಥಾಚಾರ್, ಬಾಳಗಾರು ಜಯತೀರ್ಥಾಚಾರ್ ನೇತೃತ್ವ ವಹಿಸಿದ್ದರು. ಮತ್ತೂರಿನ ಋತ್ವಿಜರು ಸಹಕರಿಸಿದರು.