ಭೀಮಪ್ಪಗೆ 5ನೇ ಬಾರಿ ಗೆಲುವು

ಧಾರವಾಡ,ಡಿ31: ತಾಲ್ಲೂಕಿನ ತಡಕೋಡ ಗ್ರಾಮದ ಭೀಮಪ್ಪ ಕಾಸಾಯಿ ಐದನೇ ಬಾರಿ ಗ್ರಾಮ ಪಂಚಾಯತ್‍ಗೆ ಆಯ್ಕೆಯಾಗುವ ಮೂಲಕ ಗಮನಸೆಳೆದಿದ್ದಾರೆ.
1990 ರಿಂದ ಸತತವಾಗಿ ಅದೇ ವಾಡ್9ನಿಂದ ಮತ್ತೆ ಪಂಚಾಯತಗೆ ಪ್ರವೇಶ ಪಡೆದಿದ್ದಾರೆ.
ಗ್ರಾಮದಲ್ಲಿನ ರಸ್ತೆ, ಕುಡಿಯುವ ನೀರು, ಇನ್ನಿತರ ಸೌಕರ್ಯಗಳನ್ನು ಜನತೆಗೆ ಕಲ್ಪಿಸುವ ದಿಸೆಯಲ್ಲಿ ಇತರ ಸದಸ್ಯರ ಜೊತೆ ಕಾಸಾಯಿ ಅವರು ಸಹಕರಿಸುತ್ತ ಬಂದಿದ್ದಾರೆ.
ಗ್ರಾಮದ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ಪ್ರವೃತ್ತಿ ಕಾಸಾಯಿವರದ್ದು.ಈ ನಿಟ್ಟಿನಲ್ಲಿ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಮಂಜೂರಾತಿ ಪಡೆಯುವಲ್ಲಿ ಹಾಗೂ ಗ್ರಾಮದ ರೈತರ ಅನುಕೂಲಕ್ಕಾಗಿ ಪಶು ಚಿಕಿತ್ಸಾಲಯವನ್ನು ಗ್ರಾಮಕ್ಕೆ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.