ಭೀಮನಗೌಡ ಇಟಗಿ ಅವರಿಗೆ ಬೆಂಬಲ-ಭಾವ ಸಾಬ್

ರಾಯಚೂರು.ನ.೧೧-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಭೀಮನಗೌಡ ಇಟಗಿ ಅವರನ್ನು ಹಾಗೂ ರಾಜ್ಯ ಕಸಾಪ ಅಧ್ಯಕ್ಷರ ಚುನಾವಣೆ ಸ್ಪರ್ಧಿಸಿದ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಚನ್ನೇಗೌಡರನ್ನು ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಚುನಾವಣೆಯಲ್ಲಿ ಬೆಂಬಲಿಸುತ್ತಿದೆ ಎಂದು ಕನ್ನಡ ಕ್ರಿಯಾ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಭಾವ ಸಾಬ್ ರವರು ಇಂದು ಭೀಮನಗೌಡ ಇಟಗಿ ಬೆಂಬಲಿತ ಮತಯಾಚನೆ ಸಂದರ್ಭದಲ್ಲಿ ಹೇಳಿದರು.
ಮುಂದುವರೆದು ಭೀಮನಗೌಡ ಇಟಗಿಯವರು ಸಾಹಿತ್ಯ ಪರಿಷತ್ತಿನ ಸೇವೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಅವರ ಕನ್ನಡ ಸೇವೆಯ ಹಿರಿತನ ದಿಂದ ನಾವು ಬೆಂಬಲಿಸುತ್ತೇವೆ ಎಂದು ಹೇಳಿದರು.
ಕನ್ನಡ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ವೆಂಕಟೇಶ್‌ರವರು ಮಾತನಾಡುತ್ತಾ ಭೀಮನಗೌಡ ಇಟಗಿಯವರು ರಾಯಚೂರು ಜನತೆಗೆ ಚಿರಪರಿಚಿತರು ಹಾಗೆಯೇ ಕೇಂದ್ರದ ಕನ್ನಡ ಕ್ರಿಯಾಸಮಿತಿಯ ಚನ್ನೇಗೌಡ ಕನ್ನಡದ ಸೇವೆಯಿಂದ ಚಿರಪರಿಚಿತರು ಇವರಿಬ್ಬರು ಗೆದ್ದು ಬಂದರೆ ಕನ್ನಡ ಸೇವೆ ಮಾಡಲು ಹೆಚ್ಚು ಅನುಕೂಲವಾಗುತ್ತದೆ ಎಂದರು. ಕನ್ನಡ ಕ್ರಿಯಾಸಮಿತಿಯ ವಲಯ ಉಪಾಧ್ಯಕ್ಷರಾದ ಮುದ್ದುಕೃಷ್ಣರವರು ಮಾತನಾಡಿ ಭೀಮನಗೌಡ ಇಟಗಿಯವರು ರಾಯಚೂರು ಜನತೆಗೆ ಚಿರಪರಿಚಿತರು ಅವರ ಸರಳತೆ ಸಜ್ಜನಿಕೆ ಹಾಗೂ ಕನ್ನಡದ ಸೇವೆ ಎಲ್ಲರೂ ಇವರನ್ನು ಬೆಂಬಲಿಸುತ್ತಾರೆ ಎಂದರು. ರಾಯಚೂರು ಜಿಲ್ಲಾ ಕಸಾಪ ಜಿಲ್ಲಾ ಅಧ್ಯಕ್ಷರ ಸೇವಾಕಾಂಕ್ಷಿ ಭೀಮನಗೌಡ ಇಟಗಿಯವರು ಮಾತನಾಡುತ್ತ ಕನ್ನಡ ಕನ್ನಡಿಗ ಕರ್ನಾಟಕ ಸೇವೆ ಮಾಡಿವೆ ಇನ್ನೂ ಹೆಚ್ಚಿನ ಸೇವೆ ಮಾಡಲು ಅನುಕೂಲ ಮಾಡಿಕೊಡಿ ಎಂದರು.
ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ, ಡಾ.ಜೆಎಲ್ ಈರಣ್ಣ ಸಾಹಿತಿ, ಡಾ.ದಸ್ತಗೀರ್ ಸಾಬ್ ದಿನ್ನಿ, ಕನ್ನಡ ಕ್ರಿಯಾಸಮಿತಿಯ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾದ ಪ್ರಕಾಶ್, ಜಾಲಿಬೆಂಚ, ಜಂಬಣ್ಣ, ಈಶ್ವರ್, ರಾಮ್ ಕುಮಾರ್, ಎಂ ಎಸ್ ಪಾಟೀಲ್, ಆರೀಫ್, ಶಹಜಾನ್ ಅನ್ವರ್ ಬಾಬು ಮಾತಾದವರು ಭಾಗವಹಿಸಿದರು.