ಭೀಮನಗೌಡ ಇಟಗಿ ಅವರಿಂದ ಭರ್ಜರಿ ಮತಯಾಚನೆ

ರಾಯಚೂರು.ಏ.೨೬-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮೇ ೯ ರಂದು ನಡೆಯುವುದರಿಂದ ಚುನಾವಣೆ ಸಮೀಪಿಸುತ್ತಿದ್ದಂತೆ, ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಭೀಮನಗೌಡ ಇಟಗಿ ಅವರಿಂದ ಇಂದು ಬೆಳಿಗ್ಗೆ ೭ರಿಂದ ೧೦ರವರೆಗೆ ಮಾನ್ವಿಯಲ್ಲಿ ಕಸಾಪದ ಸದಸ್ಯರ, ಮತ್ತು ಜನನಾಯಕರ, ಮನೆ ಮನೆಗೆ ತೆರಳಿ ಮತಯಾಚಿಸಿದರು.
ಅದರಲ್ಲಿ ಹಿರಿಯರಾದ ಬಸನಗೌಡ ಬ್ಯಾಗವಾಟ್, ದಲಿತ ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ಪುರಸಭೆ ಮಾಜಿ ಅಧ್ಯಕ್ಷರಾದ ಲಕ್ಷ್ಮೀದೇವಿ ನಾಯಕ್, ಹಿರಿಯರಾದ ಡಿ.ವೆಂಕಟೇಶ್, ಗುತ್ತೇದಾರರಾದ ಪಂಪಾಪತಿ ಪೂಜಾರಿ, ನಿವೃತ್ತ ಮುಖ್ಯಗುರುಗಳಾದ ಮಡಿವಾಳಯ್ಯ ನಂದಿಕೋಲಮಠ, ವಕೀಲರು ಗಳಾದ ಶೇಖರಪ್ಪ ಹಿರೇಕೊಟ್ನೆಕಲ್, ಬಿ.ಕೆ.ಅಂಬರೀಶಪ್ಪ ಹಾಗೂ ಅನೇಕ ಹಿರಿಯರ, ಯುವಕರ ಮತ್ತು ಕಸಾಪ ಸದಸ್ಯರ ಮನೆಮನೆಗೆ ತೆರಳಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಭ್ಯರ್ಥಿಯಾದ ಭೀಮನಗೌಡ ಇಟಗಿ ಅವರು ಹೋಗಿ ನಾನು ನಾಲ್ಕು ದಶಕಗಳಿಂದ, ಕನ್ನಡದ ಸೇವಕನಾಗಿ ಸೇವೆ ಮಾಡುತ್ತಿದ್ದೇನೆ.
ಆದ್ದರಿಂದ ತಾವುಗಳೆಲ್ಲರೂ ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ತಾಲೂಕ ನೌಕರ ಸಂಘದ ಅಧ್ಯಕ್ಷರಾದ ಶ್ರೀಶೈಲಗೌಡ ತಾಲೂಕ ಕಸಾಪ ಅಧ್ಯಕ್ಷರಾದ ಮೊಮ್ಮದ್ ಮುಜೀಬ್ ಕಸಾಪದ ನಿಕಟಪೂರ್ವ ಅಧ್ಯಕ್ಷರಾದ ಮೂಕಪ್ಪ ಕಟ್ಟಿಮನಿ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಡಿ ಬಸನಗೌಡ, ಶಿವಕುಮಾರ್ ರಾಮದುರ್ಗ, ಸಂಜೀವಪ್ಪ ಚಲವಾದಿ,ಚನ್ನಬಸವರಾಜ ಮಾಡಗಿರಿ, ಶ್ರೀಶೈಲ್ ಅಂಗಡಿ, ವೈ ಶ್ರೀನಿವಾಸ ಮುಂತಾದವರು ಉಪಸ್ಥಿತರಿದ್ದರು.