ಭೀಮಕಪ್ ಸೀಜನ್ ೧ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಆನೇಕಲ್. ಮಾ. ೫- ಮಂಚನಹಳ್ಳಿ ಗ್ರಾಮದ ಬಳಿಯಲ್ಲಿ ಮಾಯಸಂದ್ರ ಮೂರ್ತಿ ಮತ್ತು ರಾಯಲ್ ಸ್ಟೈಕರ್‍ಸ್ ವತಿಯಿಂದ ಆಯೋಜಿಸಿದ್ದ ಬೀಮ ಕಪ್ ಸೀಜನ್ ೧ ಕ್ರಿಕೆಟ್ ಪಂದ್ಯಾವಳಿಗೆ ಬಿಎಸ್ಪಿ ಪಕ್ಷದ ರಾಜ್ಯ ಖಜಾಂಚಿ ಡಾ. ಚಿನ್ನಪ್ಪ ಚಿಕ್ಕಹಾಗಡೆ ರವರು ಚಾಲನೆ ನಂತರ ಬಹುಮಾನ ವಿತರಣೆ ಮಾಡಿದರು.
ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾದ ಮೂರ್ತಿ, ಮಂಜುನಾಥ್, ಮೋಹನ್ ಕುಮಾರ್, ಮುರಳಿ ರವರು, ಇನ್ನು ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ವಿನೋದ್, ಮೋಹನ್ ಕುಮಾರ್, ಕೇಶವ ಸಂಪತ್ ಕುಮಾರ್, ಅಪ್ಪಿ. ಶ್ರೇಜನ್ ಹಾಜರಿದ್ದರು.