ಭೀಕ್ಷೆ ಬೇಡಿ ಬಡ ಹಣ್ಣು ಮಕ್ಕಳ ಬವಣೆ ನೀಗಿಸಿದ – ತಾಯಿ ಕ್ರೀಸ್ಟಿನ್

ಬೀದರ:ಫೆ.6:ಮಂಗಳೂರಿನ ಕಡು ಬಡುತನದಲ್ಲಿ ಹುಟ್ಟಿ ಕಿತ್ತು ತಿನ್ನುವ ಬೇಗಿಯಲ್ಲಿ ಬಳಲಿ ಹುಟ್ಟಿದ ಐದು ವರ್ಷದಲ್ಲಿ ಪೊಲಿಯೋಗೆ ತುತ್ತಾಗಿ ಕಾಲು ಕಳೆದುಕೊಂಡು ಅಂಗವಿಕಲರಾದರು ಎದೆ ಗುಂದದೆ ಸಾವಿವಾರು ಬಡ ಹೆಣ್ಣು ಮಕ್ಕಳಿಗೆ ಬದುಕಿನ ಸಂಕಷ್ಟದ ಬವಣೆ ನೀಗಿಸಿದವರು ತಾಯಿ ಕ್ರೀಸ್ಟಿನ್ ಎಂದು ಕ.ಸಾ.ಪ. ಜಿಲ್ಲಾ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ನುಡಿದರು.

ಕ.ಸಾ.ಪ ತಾಲೂಕಾ ಹಾಗೂ ಜಿಲ್ಲಾ ಘಟಕ ಆಯೋಜಿಸಿರುವ ಮನೆಯಂಗಳದಲ್ಲಿ ಮಾತುಕತೆಯನ್ನು ಮೈಲೂರಿನ ತಾಯಿ ಕ್ರಿಸ್ಟೀನ್ ರವರ ಮನೆಯಲ್ಲಿ ಅಪರೂಪದ ಕಾರ್ಯಕ್ರಮ ಉದ್ಘಾಟಿಸಿದ ಶ್ರೀಕಾಂತ ಸ್ವಾಮಿ ರಾಜ್ಯ ಸಂಚಾಲಕರು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ಮಾತನಾಡುತ್ತ - ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸಾಕ್ಷಾತ ಕಪಿಲ ಸಿದ್ಧ ಮಲ್ಲಿಕಾರ್ಜುನ ಎಂಬಂತೆ ತಾಯಿ ಕ್ರೀಸ್ಟಿನ್ ತಾಯು ಸಂಕಷ್ಟದ ಸುಳಿಯಲ್ಲಿ ಸಿಕ್ಕು ಅನೇಕ ಹೆಣ್ಣು ಮಕ್ಕಳ ಬಾಳು ಬೆಳಗಿದವರು. 
ಸಂವಿಧಾನದ ಬಗ್ಗೆ ಜಾಗೃತಿ ಮಾಡುವಾಗ ತಾಯೊಬ್ಬರೆ ನಮ್ಮ ಜೊತೆಗಿದ್ದು ನೂರಾರು ಗ್ರಾಮಗಳು ಸುತಾಡಿ ಸೇವೆಯೆಂಬುವುದು ಸಾರ್ಥಕ ಜೀವನದ ಸಂತೃಪ್ತಿಯೆಂಬುವುದನ್ನು ತೋರಿಸಿಕೊಟ್ಟ ಮಹಾಮಾತೆಯಿವರು. 76 ವರ್ಷದ ಸಿಸ್ಟರ್ ಕ್ರಿಸ್ಟೀನ್ ಮಿಸ್ಕಿತ್ ಎ.ಸಿ. ಕಾರ್ಮೆಲ್ ನಿಕೇತನ ಸಂಸ್ಥೆ ಕಟ್ಟಿಕೊಂಡು ಜಿಲ್ಲೆಯ ವಿಧವೆಯವರಿಗೆ, ಅಂಗವಿಕಲರಿಗೆ, ನಿರ್ಗತಿಕರ ಬಾಳಿಗೆ ಬೆಳಕಾಗಿ ಉಪಜೀವನಕ್ಕೆ ನಾಂದಿಯಾದವರು. ಅನೇಕ ಹೆಣ್ಣು ಮಕ್ಕಳು ಅನ್ಯಾಯಕ್ಕೆ ಒಳಗಾದಾಗ ನ್ಯಾಯ ದೊರಕಿಸಿಕೊಟ್ಟವರು ಸತಿ-ಪತಿ ಜಗಳವಾಗಿ ಸಂಸಾರದಲ್ಲಿ ಕಗ್ಗಂಟಾದಾಗ ಕೈಹಿಡಿದು ಮುನ್ನಡಿಸಿದ ಮಾರ್ಗದರ್ಶಕರಿವರು ಎಂದು ತಮ್ಮ ಅನುಭವವನ್ನು ಹಂಚಿಕೊಂಡು ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದರು. 
ದೇವೆಂದ್ರ ಹಳ್ಳಿಖೇಡಕರ ಪ್ರಾಚಾರ್ಯರು ಕ್ರಿಸೀನ್ ರವರ ಸೇವಾ ಮನೋಭಾವನೆ ನೋಡಿದರೆ ಅವರೊಬ್ಬ ಬೀದರ ಜಿಲ್ಲೆಯ ಮದರ್ ತೇರಿಸಾ ಎನ್ನಬುವುದಾಗಿದೆ. ಅಂಗವಿಕಲವೆಂಬುವುದು ಕೀಳರಿಮೆಯಲ್ಲ. ಅಂತಹ ಸಂಕಷ್ಟದ ಮಧ್ಯಯು ಅನೇಕ ಜನಹಿತ ಕಾರ್ಯಕ್ರಮಗಳನ್ನು ಮಾಡಿ ಹೆಣ್ಣು ಮಕ್ಕಳಿಗೆ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದವರು ಸಾಮಾಜಕೊಂದು ಮಾದರಿಯೆಂದು ತಮ್ಮ ವಿಚಾರ ಮಂಡಿಸಿದರು.
ಚಾಂಗಲೇರಿ ಶಿಕ್ಷಕ, ರಾಜೇಶ್ವರ ಹೂಗಾರ ಹಾಗೂ ಗೊಂಡಾ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ ಜೋಳದಾಬಕಾ ಮಾತೆ ಕ್ರಿಸ್ಟೀನ್ ಜೊತೆ ಸಂವಾದ ನಡೆಸಿ ತಾವು ಬಡ ಮಕ್ಕಳ ಸರ್ವಾಂಗೀಣ ಬದುಕಿಗಾಗಿ ಭೀಕ್ಷೆ ಬೇಡುವಾಗ ವೇದನೆಯಾಗಿಲ್ಲವೆ ? ಸಿಟ್ಟು ಯಾರಾದರೂ ಮಾಡಿದಾಗ ತೊಂದರೆಯಾಗಿಲ್ಲವೆ ಎಂದಾಗ ಅವರು ನಗು ನಗುತ್ತಲೆ ಮಾತನಾಡಿ ಹೊಸ ತನಕ್ಕೆ ಕಾಲಿಟ್ಟಾಗ ಸಂಕಷ್ಟ ಸಹಜ. ಅದನ್ನು ಸಂತೃಪ್ತಿಯಾಗಿ ಸ್ವೀಕರಿಸಿದರೆ ಸಮಾಜ ಪರಿವರ್ತನೆಯಾದರೆ ಅದೆ ಸಾಧನೆ ಎಂದು ಮುಕ್ತ ಮನಸ್ಸಿನಿಂದ ಉತ್ತರಿಸಿರಿ.  
ಕಾರ್ಮೇಲ್ ನಿಕೇತನ ನಿರ್ದೇಶಕರು ಹಾಗೂ ಅಪ್ಪಟ ಸಮಾಜ ಸೇವಕರಾದ ಸಿಸ್ಟರ್ ಕ್ರಿಸ್ಟೀನ್ ಮಿಸ್ಕಿತ್ ಎ.ಸಿ. ತಮ್ಮ ನೈಜ ಅನುಭವ ನಿವೇದಿಸುತ್ತ, ನಾನೊಬ್ಬ ಕಟ್ಟಕಡೆಯ ನಿರ್ಗತಿಕ ಬಡತನದಲ್ಲಿ ಜನ್ಮ ತಾಳಿ ಅಂಗವಿಕಲನಾದೆ. ನನ್ನಲ್ಲಿ ಸೇವೆ ಮಾಡಬೇಕೆಂಬ ದುಡಿತವಿದ್ದು, ಸಿಸ್ಟರ್ ಆಗಬೇಕೆಂಬ ಛಲತೊಟ್ಟು ಸಮಾಜ ಸೇವೆಗೆ ನನ್ನನ್ನೆ ನಾನು ಮಾರ್ಪಡಿಸಿಕೊಂಡೆ ನನಗಾದ ಸಂಕಷ್ಟ ಅಂಗವಿಕಲ ಹೆಣ್ಣು ಮಕ್ಕಳಿಗಾಗಬಾರದು, ಅವರ ಬಾಳಿಗೆ ಸ್ಪಂದಿಸುವ ಹುರಿ ಹೊಂದಿ ತಾಂತ್ರಿಕ ತರಬೇತಿ ಪಡೆದು ಅನುಭವ ಪಡೆದುಕೊಂಡು ಸ್ವಾವಲಂಬಿ ಜೀವನಕ್ಕೆ ಒಂದು ದಾರಿಹುಡಿಕಿಕೊಂಡೆ. 
ಮಂಗಳೂರಿನಿಂದ ಬೀದರಿಗೆ ಬಂದಾಗ ಹಳ್ಳದಕೇರಿ, ಹೂಗೇರಿ, ಗೋರನಳ್ಳಿ, ಚಿಟ್ಟಾ ಹೀಗೆ ಅನೇಕ ಹಳ್ಳಿಗಳಲ್ಲಿ ಓಡಾಡಿ ಹೆಣ್ಣು ಮಕ್ಕಳ ಸಂಕಷ್ಟಗಳನ್ನು ಅರಿತು 42 ಜನರನ್ನು ಒಂದೆಡೆ ಸೇರಿಸಿ ಅವರೆಲ್ಲರಿಗೆ ತಂತ್ರಜ್ಞಾನದ ರುಚಿಗುಣಪಡಿಸಿದೆ. ಅವರೆಲ್ಲರು ಇಂದು ಬದುಕುವ ರೀತಿ ಕಲೆತು ಸ್ವಾವಲಂಬಿ ಜೀವನ ಸಾಗಿಸುತ್ತ ಆರ್ಥಿಕ ಸದೃಢತೆ ತಮ್ಮದಾಗಿಸಿಕೊಂಡಿದ್ದಾರೆ. ಜೀವನ ಸಂಕಷ್ಟವಾದರು ಸಂತೃಪ್ತಿಯಂತ ಸಾಗಲು ಅನೇಕರ ಪ್ರೇರಣೆಯ ಮಾತು ಅವರ ಜೀವನಕ್ಕೆ ನಾಂದಿ ಹಾಡಿದೆ ಎಂದು ನುಡಿದರು. 
ನಾನೇನು ದೊಡ್ಡ ಕೆಲಸ ಮಾಡಿಲ್ಲ. ದೇವರ ಆಶೀರ್ವಾದ ಅವರ ಹಿತ ನುಡಿಗಳ ಪ್ರೇರಣೆಯಿಂದ ಕೆಲಸ ಮಾಡಿದ್ದೇನೆಂದು ತಮ್ಮ ಅನುಭವ ಹಂಚಿಕೊಂಡು ನನ್ನ ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನವರು ಬಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಂದು ಅಪರೂಪದ ಕ್ಷಣವೆಂದು ಕೃತಜ್ಞತೆ ಸಲ್ಲಿಸಿದರು. 
ಕಾರ್ಯಕ್ರಮದಲ್ಲಿ ಮೇರಿ ಹಾಗೂ ಕನ್ಯಾಕುಮಾರಿ ತಮ್ಮ ಅನುಭವವನ್ನು ಹಂಚಿಕೊಂಡರು. ತಾಲೂಕಾ ಕ.ಸಾ.ಪ. ಅಧ್ಯಕ್ಷರಾದ ಎಮ್.ಎಸ್. ಮನೋಹರ ಮಾತನಾಡಿ 25 ವರ್ಷಗಳ ತಾಯಿ ಜೊತೆ ಒಡನಾಟ ಇದ್ದರು ಸಹಿತ ಅವರ ಅಂತರಾಳದ ಅನುಭವ ಹಂಚಿಕೊಂಡರು ಸಾಧ್ಯವಾಗಲಿಲ್ಲ. ಇಂದು ಅವರ ನೈಜ ಜೀವನಗಾಥೆ ಅರಿಯಲು ಅವಕಾಶ ಮಾಡಿಕೊಟ್ಟಿದ್ದು ನಮ್ಮೆಲ್ಲರ ಭಾಗ್ಯವೆಂದು ನುಡಿದು ಕ.ಸಾ.ಪ ಪರವಾಗಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಂಬುಲಿಂಗ ವಾಲದೊಡ್ಡಿ ನಿರೂಪಿಸಿದರೆ, ಟಿ.ಎಮ್. ಮಚ್ಚೆ ಸ್ವಾಗತಿಸಿದರೆ, ಶಿವಶಂಕರ ಟೋಕರೆ ವಂದಿಸಿದರು.