ಭೀಕರ ಹಿಮಪಾತ: ೧೫ ಕಾರ್ಮಿಕರ ಮೃತದೇಹ ಪತ್ತೆ

ಜಾರ್ಖಂಡ್, ಎ.೨೮- ಇಂಡೋ-ಚೀನಾ ಗಡಿ ಪ್ರದೇಶವಾದ ಚಮೋಲಿ ಜಿಲ್ಲೆಯ ಸುಮ್ನಾದಲ್ಲಿ ನಡೆದ ಭೀಕರ ಹಿಮಪಾತದ ನಂತರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಈ ತನಕ ಸುಮಾರು ೧೫ ಮಂದಿ ಬಿಆಎರ್‌ಒ (ಬಾರ್ಡರ್ ಆಂಡ್ ರೋಡ್) ಕಾರ್ಮಿಕರ ಮೃತದೇಹ ಸಿಕ್ಕಿದೆ.
ಜೋಶಿಮಠ್‌ನಲ್ಲಿ ಕಾರ್ಮಿಕರ ಮೃತದೇಹಗಳ ಶವಪರೀಕ್ಷೆ ನಡೆಸಲಾಗಿದ್ದು, ಬಳಿಕ ಶ್ರೀನಗರ್ ಗರ್ವ್ಹಾಲ್ ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನಲಾಗಿದೆ. ಎಲ್ಲಾ ಕಾರ್ಮಿಕರ ಗುರುತು ಪತ್ತೆಯಾಗಿದೆ. ಬಿಆರ್‌ಒ ಮೂಲಕ ಕಾರ್ಮಿಕರ ಮೃತದೇಹಗಳನ್ನು ಅವರವರ ಕುಟುಂಬಗಳಿಗೆ ಹಸ್ತಾಂತರಿಸುವ ಬಗ್ಗೆ ಜಾರ್ಖಂಡ್‌ನ ಸರ್ಕಾರದ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಚಮೋಲಿ ಜಿಲ್ಲಾಧಿಕಾರಿ ಸ್ವಾತಿ ಎಸ್. ಬಡೌರಿಯಾ ಅವರು ತಿಳಿಸಿದ್ದಾರೆ. ಶುಕ್ರವಾರ ಚಮೋಲಿಯಲ್ಲಿ ಭೀಕರ ಹಿಮಪಾತ ಸಂಭವಿಸಿತ್ತು. ಸದ್ಯ ಮಲಾರಿಯಿಂದ ಸುಮ್ನಾಗೆ ತೆರಳುವ ಮಾರ್ಗವನ್ನು ಸ್ವಚ್ಛಗೊಳಿಸಲಾಗಿದೆ.