ಭೀಕರ ರಸ್ತೆ ಅಪಘಾತ: ಲಾರಿ ಚಾಲಕ ಸಾವು

ಕಲಬುರಗಿ,ಜೂ 6: ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಚಾಲಕ ಸಾವಿಗೀಡಾದ ಘಟನೆ ಜೇವರ್ಗಿ ತಾಲೂಕಿನ ರೇವನೂರು ಕ್ರಾಸ್ ನಲ್ಲಿ ನಡೆದಿದೆ.
ಕಲಬುರಗಿ ತಾಲೂಕಿನ ತಾಡ ತೇಗನೂರ ಗ್ರಾಮದ ಸುಮಾರು 32 ವರ್ಷದ ಯುವಕ ಮಹಾಂತೇಶ ಭೀಮಾಶಂಕರ ಎಂಬಾತ ಮೃತ ದುರ್ದೈವಿ.
ಕೆಟ್ಟು ಹೋದ ತನ್ನ ಲಾರಿ ಪರೀಕ್ಷಿಸಲು ಹೋದಾಗ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತ ಮಹಾಂತೇಶನ ಮೃತದೇಹ ಶವ ಪರೀಕ್ಷೆಗಾಗಿ ಜೇವರ್ಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಜೇವರ್ಗಿ ಪೆÇೀಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ