ಮಾನ್ವಿ,ಮಾ.೩೦- ತಾಲೂಕಿನ ನೀರಮಾನವಿ ಗ್ರಾಮದ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ ೮:೩೦ ರ ಸಮಯದಲ್ಲಿ ಬೈಕುಗಳ ಮದ್ಯ ಭೀಕರವಾದ ರಸ್ತೆ ಅಪಘಾತವಾಗಿದ್ದು ನಾಲ್ಕೈದು ತಿಂಗಳು ಗರ್ಭಿಣಿ ಸುವರ್ಣ ( ೨೪ ) ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನುಳಿದ ಇಬ್ಬರಲ್ಲಿ ರಮೇಶ ಎನ್ನುವ ಒಬ್ಬನಿಗೆ ಗಂಭೀರವಾದ ಗಾಯವಾಗಿದ್ದು ರಾಯಚೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಇದಕ್ಕೆ ಸಂಬಂಧಿಸಿದಂತೆ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ..ಕಳೆದ ವರ್ಷ ಮದುವೆಯಾಗಿದ್ದ ಸುವರ್ಣ ಗಂಡ ರಾಘವೇಂದ್ರ ಇವರು ಕೆ ಎ ೫೩ ಎಚ್ ಎನ್ ೭೦೩೧ ವಾಹನದ ಮೂಲಕ ಮಾನ್ವಿಯಿಂದ ಸ್ವಗ್ರಾಮ ನೀರಮಾನವಿಗೆ ತೆರಳುತ್ತಿರುವ ಸಮಯದಲ್ಲಿ ಎದುರಿಗೆ ಕೆ ಎ ೩೬ ಇ ಝಡ್ ೨೫೪೨ ವಾಹನದ ಮೂಲಕ ಆಗಮಿಸಿದ ಆರೋಪಿ ರಮೇಶ ಕುರುಕುಂದ ಎನ್ನುವವರ ವಾಹನಗಳು ನೇರವಾಗಿ ಡಿಕ್ಕಿಯಾದ ಪರಿಣಾಮವಾಗಿ ನಡುರಸ್ತೆಯಲ್ಲಿ ಬಿದ್ದಿದ್ದಾರೆ ಅದೇ ಸಮಯದಲ್ಲಿ ಹಿಂಬದಿಯಿಂದ ವೇಗವಾಗಿ ಆಗಮಿಸುತ್ತಿದ್ದ ಅಪರಿಚಿತ ಟ್ರಾಕ್ಟರ್ ತುಂಬು ಗರ್ಭಿಣಿಯಾಗಿದ್ದ ಸುವರ್ಣ ಇವರ ತಲೆಯ ಮೇಲೆ ಹರಿದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತರಾಗಿದ್ದು ಅವರ ಪತಿ ರಾಘವೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಎದುರಿಗೆ ಆಗಮಿಸಿದ ರಮೇಶ ಕುರುಕಂದ ಇವರಿಗೆ ತಲೆಗೆ ಪೆಟ್ಟು ಬಿದ್ದು ದೊಡ್ಡ ಮಟ್ಟದ ಗಂಭೀರವಾಗಿ ಗಾಯವಾಗಿದ್ದು ರಾಯಚೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸ್ ಇಲಾಖೆಯವರು ಸ್ಥಳ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ ಎಂದರು..