ಭೀಕರ ರಸ್ತೆ ಅಪಘಾತ-ಕೊಡಗಿನ ದಂಪತಿ ಸಾವು

ಹುಣಸೂರು,ಜು.01-ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಸೋಮವಾರಪೇಟೆ ಬಳಿಯ ಹಿರಿಕರ ಗ್ರಾಮದ ದಂಪತಿ ಸಾವು.
ಹುಣಸೂರು ತಾಲ್ಲೂಕಿನ ಬಿಳಿಕೆರೆ ಬಳಿಯ ರಂಗನಕೊಪ್ಪಲು ಗ್ರಾಮದ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.
ನಿವೃತ್ತ ಪ್ರಾಂಶುಪಾಲರಾದ ಹೆಚ್.ಬಿ.ಬೆಳ್ಳಿಯಪ್ಪ (66) ಸ್ಥಳದಲ್ಲೇ ಸಾವನಪ್ಪಿದರೆ, ಅವರ ಪತ್ನಿ ವೀಣಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಮಾರ್ಗ ಮದ್ಯೆ ಸಾವನಪ್ಪಿದ್ದಾರೆ.

ಇಂದು ಮಧ್ಯಾಹ್ನ ಕಾರಿನಲ್ಲಿ ಮೈಸೂರಿಗೆ ತೆರಳುತ್ತಿದ್ದ ಬೆಳ್ಳಿಯಪ್ಪ ದಂಪತಿ. ಭೀಕರ ಅಪಘಾತದಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.