ಭೀಕರ ಅಪಘಾತ – ವಿದ್ಯಾರ್ಥಿಗಳು ಪವಾಡ ಸದೃಶ ಪಾರು

ಮಂಗಳೂರು, ಆ.೩೦- ನಗರದ ಪಂಪ್‌ವೆಲ್ ಫ್ಲೈಓವರ್‌ನಲ್ಲಿ ಆಗಸ್ಟ್ ೨೯ ರ ಶನಿವಾರ ರಾತ್ರಿ ನಡೆದ ಭೀಕರ ಅಪಘಾತ ಕಾರಿನಲ್ಲಿದ್ದ ವಿದ್ಯಾರ್ಥಿಗಳು ಪವಾಡ ಸದೃಶವಾಗಿ ಪಾರಾಗಿದ್ದಾರೆ.

ಅಪಘಾತದಲ್ಲಿ ನಡೆದ ಕಾರು ಕೇರಳ ನೋಂದಣಿ ಮಾರುತಿ ಎ-ಸ್ಟಾರ್ ಕಾರು ಆಗಿದ್ದು ಅದು ಫ್ಲೈಓವರ್‌ನಲ್ಲಿ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಫ್ಲೈ ಓವರ್‌ನ ರಕ್ಷಣಾತ್ಮಕ ಸೈಡ್‌ವಾಲ್ ಕಾರು ಕೆಳಗೆ ಬೀಳದಂತೆ ತಡೆದಿದೆ.

ಮೂವರು ಕಾಸರಗೋಡಿನ ವಿದ್ಯಾರ್ಥಿಗಳು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಓರ್ವ ಸ್ನೇಹಿತನನ್ನು ಬಿಟ್ಟು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಕಾರು ಸಂಪೂರ್ಣ ಹಾನಿಗೊಂಡಿದ್ದು ಅಪಘಾತದಿಂದಾಗಿ ಫ್ಲೈಓವರ್‌ನಲ್ಲಿ ಒಂದು ಗಂಟೆ ಕಾಲ ಸಂಚಾರ ಅಸ್ತವ್ಯಸ್ತವಾಗಿದೆ. ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಸಂಚಾರದಟ್ಟನೆಯನ್ನು ನಿಭಾಯಿಸಿದ್ದಾರೆ.