ಭಿಮಾ ಕೊರೆಗಾಂವ್: ೨೦೩ನೇ ವಿಜಯೋತ್ಸವ

ಸಿರವಾರ.ಜ.೦೧-ಕೋರೆಗಾಂವ್‌ನ ಭೀಮಾ ನದಿಯ ದಂಡೆಯ ಸಮೀಪ. ಬಾಂಬೆ ಲೈಟ್ ವೇಯ್ಟ್ ಇನ್ ಫೆಂಟ್ರಿ ಮೊದಲನೇ ರೆಜಿಮೆಂಟ್, ಎರಡನೇ ಬೆಟಾಲಿಯನ್‌ನ ಐನೂರು ಮಹರ್ ಸೈನಿಕರು ಹಾಗೂ ಪೇಶ್ವೆಗಳ ಸಾವಿರ ಸಾವಿರ ಸಂಖ್ಯೆಯ ಸೈನಿಕರ ಮಧ್ಯೆ ಕದನ ನಡೆಯಿತು ಎಂದು ಕೆನಾರ ಬ್ಯಾಂಕಿನ ಶಿವಮೂರ್ತಿ ಹೇಳಿದರು.
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಡಾ.ಬಿ.ಅರ್.ಅಂಬೇಡ್ಕರ್ ನಾಮಫಲಕದ ಮುಂದೆ ಧಮ್ಮ ದೀಪ ಚಾಲನಾ ಸಮಿತಿಯಿಂದ ಹಮ್ಮಿಕೊಂಡಿದ ಭಿಮಾ ಕೊರೆಗಾಂವ್ ೨೦೩ನೇ ವಿಜಯೋತ್ಸವವನ್ನು ಮಾಲಾರ್ಪಣೆ ಮಾಡಿ, ಪಂಚಶೀಲ ದ್ವಜಾ ಹಾಗೂ ಧಮ್ಮ ಚರ್ಕ ದ್ವಜಾರೋಹಣವನ್ನು ಮಾಡಿ, ಬುದ್ಧ ವಂಧನೆ ಮಾಡಿ ನಂತರ ಮಾತನಾಡಿದ ಅವರು ಪೇಶ್ವೆಗಳದು ಬ್ರಾಹ್ಮಣರ ಸೈನಿಕರೇ ಹೆಚ್ಚಿದ್ದ ಇಪ್ಪತ್ತೆಂಟು ಸಾವಿರ ಸಂಖ್ಯೆಯ ಸೈನ್ಯ.
ಐನೂರು ಮಂದಿಯಿದ್ದ ’ಅಸ್ಪೃಶ್ಯ’ ಸೈನಿಕರಿಗೆ ಅವರ ಮುಂದೆ ನಿಲ್ಲಲಾದರೂ ಸಾಧ್ಯವೇ ಎಂದು ಪ್ರಶ್ನೆ ಮೂಡಿಸುವಂಥ ಸನ್ನಿವೇಶ. ಶಿರೂರಿನಿಂದ ಇಪ್ಪತ್ತೇಳು ಮೈಲು ಭೀಮಾ ಕೋರೆಗಾಂವ್ ನವರೆಗೆ ನಡೆದುಕೊಂಡೇ ಬಂದ ಮಹರ್ ಸೈನಿಕರಿಗೆ ಆಹಾರ, ನೀರು ಕೂಡ ಇರಲಿಲ್ಲ.ಆದರೂ ಹನ್ನೆರಡು ಗಂಟೆಗಳ ಕಾಲ ಆ ಸೈನಿಕರು ರಣಭೂಮಿಯಲ್ಲಿ ಕಾದಾಡಿದರು.
ಆ ಯುದ್ಧದಲ್ಲಿ ಪೇಶ್ವಾಗಳು ಬರೀ ಸೋತಿದ್ದಲ್ಲ. ಮಹಾರಾಷ್ಟ್ರದಲ್ಲಿ ಪೇಶ್ವಾಗಳ ಉತ್ತರಾದಾಯಿತ್ವವೇ ಅಂತ್ಯವಾಯಿತು. ಹಲವು ಕಾರಣಗಳಿಗಾಗಿ ಈ ಯುದ್ಧಕ್ಕೆ ಮಹತ್ವ ಇದೆ ಎಂದರು.
ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶ ಕಲ್ಲೂರು ಮಾತನಾಡಿ ಸೈನಿಕರ ಸಾಹಸ ಬಿಂಬಿಸುವ ಕೋರೆಗಾಂವ್ ಸ್ಥಂಭ (ವಿಜಯ ಸ್ಥಂಭ) ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ಇತ್ತು. ಇಪ್ಪತ್ತೆರಡು ಮಹರ್ ಸೈನಿಕರ ತ್ಯಾಗದ ಬಗ್ಗೆ ಅದರಲ್ಲಿ ಪ್ರಸ್ತಾವ ಇತ್ತು. ಇಂದಿಗೂ ಆ ಸ್ಮಾರಕ ಅಸ್ಪೃಶ್ಯರ (ಮಹರ್) ವೀರ ಕಥೆಗೆ ಸಾಕ್ಷಿಯಂತೆ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿವರ್ಷ ಜನವರಿ ಒಂದರಂದು ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದರು ಎಂದರು.
ಡಾ. ಷಣ್ಮುಖ, ಶಿವಕುಮಾರ ಇನ್ನಿತರರು ಮಾತನಾಡಿದರು. ಹನುಮಂತಪ್ಪ, ದಲಿತ ಮುಖಂಡ ಅರಳಪ್ಪ ಯದ್ದಲದಿನ್ನಿ, ಶಿವರಾಜಗಂಟೆ, ತೊಟಗಾರಿಕೆ ಇಲಾಖೆಯ ಏಸುಮಿತ್ರ, ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶ, ಯಲ್ಲಪ್ಪ ನಾರಬಂಡಿ, ಪ.ಪಂ ಸದಸ್ಯ ರಾಜಮಹ್ಮದ್, ಖಾಸಿಂ ಮೊತಿ, ಧಮ್ಮ ದೀಪ ಚಾಲನಾ ಸಮಿತಿ ಅಧ್ಯಕ್ಷ ಹನುಮಂತ, ಉಪಾಧ್ಯಕ್ಷ ಶಾಂತಪ್ಪ ಪಿತಗಲ್, ಜಯಪ್ಪ ಗುತ್ತೆದಾರ, ಗುರುನಾಥ, ಶಿಕ್ಷಕರಾದ ಮೌನೇಶ ಹಿರೆಹಣಗಿ, ಮಲ್ಲಪ್ಪ ಚಾಗಭಾವಿ, ರಮೇಶ ಭಂಡಾರಿ, ತಿರುಮಲರಾವ್, ಸಂಜಿವ್ ಕುಮಾರ, ಅರವಿಂದ, ಬಾಲಪ್ಪ ಹಳ್ಳಿ ಹೊಸೂರು, ತಿಮ್ಮಣ್ಣ ಮರಾಟ, ರಮೇಶ ಚಲುವಾದಿ, ಮಲ್ಲಪ್ಪ ಆಟೋ, ಕಾಂತ, ತಿಮ್ಮಣ್ಣ, ನಾಗರಾಜ, ಪಾರ್ಥ,