ಭಿತ್ತಿಪತ್ರ ಬಿಡುಗಡೆ

ಬಂಕಾಪುರ,ಜ20 : ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಐತಿಹಾಸಿಕ ಪ್ರಸಿದ್ಧವಾದ ಶ್ರೀ ಯಂಕಮ್ಮ ಮತ್ತು ಶ್ರೀ ಸಂಕಮ್ಮ ದೇವಿಯ ನೂತನ ಜಾತ್ರೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಮೆರವಣಿಗೆ, ಕುಂಬಮೇಳ ನಡೆಯುತ್ತವೆ ಎಂದು ಶ್ರೀ ಯಂಕಮ್ಮ ಮತ್ತು ಶ್ರೀ ಸಂಕಮ್ಮ ದೇವಿಯ ಕಮಿಟಿಯವರು ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಕಮಿಟಿಯವರಾದ ಗುಡ್ಡಪ್ಪ ನಿಂಬಕನವರ್, ಮಾಲ್ತೇಶ್ ಆಲದಕಟ್ಟಿ, ರಾಮಣ್ಣ ಸತ್ಯಪ್ಪನವರ್, ಶೇಖಪ್ಪ ಛಬ್ಬಿ, ಸುರೇಶ್ ಕೇರಪ್ಪನವರ್, ನಿಂಗಪ್ಪ ಅರಳಿಕಟ್ಟಿ, ಶಂಕ್ರಪ್ಪ ಗಾಳಮ್ಮನವರ್, ಬಸಪ್ಪ ಸುಂಕದ, ಯಲ್ಲಪ್ಪ ದ್ವಾಸಿ, ಮಲ್ಲಪ್ಪ ಕಟಗಿ, ಶಿವಪ್ಪ ಮಾಗಿ, ಶಿವಪ್ಪ ಈರಪ್ಪನವರ ಅಜ್ಜಪ್ಪ ಡಬ್ಬುನವರ,ಮಣಿಕಂಠ ಹುರಳಿ ಮುಂತಾದ ಉಪಸ್ಥಿತರಿದ್ದರು.