ಭಿಕ್ಷಾಟನೆ ನಡೆಸುತ್ತಿದ್ದ ೧೧ ಮಕ್ಕಳ ರಕ್ಷಣೆ

ಕುಂದಾಪುರ, ನ.೯- ಶನಿವಾರ ನಗರದ ಸಂತೆ ಮಾರ್ಕೆಟ್ ಹಾಗೂ ಬಸ್ ನಿಲ್ದಾಣಗಳ ಬಳಿ ಕಾರ್ಯಾಚರಣೆ ನಡೆಸಿ ಭಿಕ್ಷಾಟನೆ ನಡೆಸುತ್ತಿದ್ದ ಶಿರಸಿ ಮತ್ತು ಹಾವೇರಿ ಮೂಲದ ಒಂಭತ್ತು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು ಸೇರಿ ಒಟ್ಟು ೧೧ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ನಿಟ್ಟೂರಿನಲ್ಲಿ ಇರಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಕುಂದಾಪುರ ಪುರಸಭೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಕ್ಕಳ ಸಹಾಯವಾಣಿ, ವಿಶ್ವಾಸದಮನೆ ಸಂಸ್ಧೆ ಜಂಟಿ ಕಾರ್ಯಾಚರಣೆ ನಡೆಸಿ ಭಿಕ್ಷಾಟನೆ ನಿರತ ಮಕ್ಕಳನ್ನು ರಕ್ಷಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ, ಕುಂದಾಪುರ ಪುರಸಭೆಯ ಪರಿಸರ ಅಭಿಯಂತರ ರಾಘವೇಂದ್ರ, ಪುರಸಭೆ ಅಧಿಕಾರಿಗಳಾದ ಶರತ್, ರಾಘವೇಂದ್ರ ನಾಯ್ಕ್, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಅರುಣ್ ಕುಮಾರ್ ಬಿ.ಎನ್., ದೇವಾ ಕುಮಾರಿ, ಸುನೀತಾ ಬಾನು, ಶಂಕರ್ ಶೆಟ್ಟಿ, ಕುಂದಾಪುರ ನಗರ ಠಾಣಾಧಿಕಾರಿ ಇನ್ಸ್‌ಪೆಕ್ಟರ್ ಸದಾಶಿವ ಗವರೋಜಿ, ಸಿಬ್ಬಂದಿ ಪ್ರಸನ್ನ, ಬೇಬಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಜಿಲ್ಲಾ
ಮಕ್ಕಳ ರಕ್ಷಣಾ ಘಟಕದ ಮಹೇಶ್ ದೇವಾಡಿಗ, ಯೋಗೀಶ್, ಸುರಕ್ಷಾ, ಸುನಂದಾ, ಸಂದೇಶ, ಅಂಬಿಕಾ, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕಿ ಪೂರ್ಣಿಮಾ ಬಾನು, ಮಕ್ಕಳ
ಸಹಾಯವಾಣಿಯ ವೃಷಕ್ ಪ್ರಮೋದ್, ವಿಶ್ವಾಸದ ಮನೆ ಸಂಸ್ಥೆಯ ಕ್ರಿಸ್ಟೋಪರ್ ಭಾಗಿಯಾಗಿದ್ದಾರೆ.