ಭಾಷೆಯ ಹೆಸರಿನಲ್ಲಿ ಸಮಾಜ ಹೊಡೆಯುವ ಕೆಲಸ ಸಲ್ಲದು

ಹೊನ್ನಾಳಿ.ಮಾ.೨೦ : ಭಾಷೆಯ ಹೆಸರಿನಲ್ಲಿ ಕೆಲ ಹೋರಾಟಗಾರರು ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದ್ದು ಅದನ್ನು ನಿಲ್ಲಿಸ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಛತ್ರಪುತ್ರಿ ಶಿವಾಜಿ ಮಹಾರಾಜರ ಕಂಚಿನ ಪುತ್ತಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಹಿಂದೂ ಸಾಮ್ರಾಟ್ ಶಿವಾಜಿ ಮಹರಾಜರ ಕಂಚಿನ ಪ್ರತಿಮೆಯನ್ನು ಸಾರ್ವಜನಿಕರಿಂದ  ದೇಣಿಗೆ ಸಂಗ್ರಹಿಸಿ ಗ್ರಾಮಸ್ಥರು ನಿರ್ಮಾಣ ಮಾಡಿದ್ದು, ಅತ್ಯಂತ ಸುಂದರವಾಗಿ ಮೂಡಿ ಬಂದಿದೆ ಎಂದರು.ಮುಖ್ಯಮಂತ್ರಿಗಳು ಮರಾಠ ನಿಗಮ ಸ್ಥಾಪನೆ ಮಾಡಿದಾಗ ಕೆಲ ನಕಲಿ ಹೋರಾಟಗಾರರು, ಹೊಟ್ಟೆ ಪಾಡಿಗೆ ಹೋರಾಟ ಮಾಡುವ ವಿರೋಧ ವ್ಯಕ್ತ ಪಡಿಸಿದ್ದರು.ಆದರೇ ನಾನು ನಿಮ್ಮ ಪರವಾಗಿನಿಂತು ಧ್ವನಿ ಎತ್ತಿದೆ. ಕೇವಲ ರಾಜಕಾರಣಕ್ಕಾಗಿ ನಾನು ನಿಮ್ಮ ಪರ ನಿಲ್ಲಲಿಲ್ಲಾ, ಮರಾಠಿಗರ ಕನ್ನಡದ ಮೇಲಿನ ಪ್ರೀತಿಯನ್ನು ಕಂಡು ನಾನು ನಿಮ್ಮ ಪರ ಧ್ವನಿ ಎತ್ತಿದೆ ಎಂದರು.ಶಿವಾಜಿ ಮಹರಾಜರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳ ಬೇಕೆಂದು ಕರೆ ನೀಡಿದ ಶಾಸಕರು, ಶಿವಾಜಿ ಮಹರಾಜರ ಹೋರಾಟಗಳನ್ನು ಮೆಲಕು ಹಾಕಿದರು. ಅಷ್ಟೇ ಅಲ್ಲದೇ ಮರಾಠ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬರುವಂತೆ ಕರೆ ನೀಡಿದರು.ಇನ್ನು ಶಿವಾಜಿ ಮಹರಾಜರ ನೆನಪಿನಾರ್ಥವಾಗಿ ಹೊನ್ನಾಳಿ ನಿವೇಶನ ಕೇಳಿದ್ದು ಜಾಗ ಮಂಜೂರು ಮಾಡಿಕೊಡುವುದಾಗಿ ಹೇಳಿದರಲ್ಲದೇ ಕಟ್ಟಡಕ್ಕೆ ವೈಯಕ್ತಿಕ ಅನುದಾನ ನೀಡುವುದಾಗಿ ಹೇಳಿದರು.ಇದೇ ವೇಳೆ ಮಾತನಾಡಿದ ಚೈತ್ರ ಕುಂದಾಪುರ ಬೆಂಗಳೂರಿನಲ್ಲಿ ಹೋರಾಟ ಮಾಡುವ ಸೋಕಾಲ್ಡ್ ಹೋರಾಟಗಾರರಿಗಿಂತ ಮರಾಠಿಗರು ಕನ್ನಡವನ್ನು ಚೆನ್ನಾಗಿ ಮಾಡುತ್ತಾರೆ ಎಂದರು. ಶಿವಾಜಿ ಮಹರಾಜರು ಜಗತ್ತಿಗೆ ಪ್ರೇರಕವಾದ ಶಕ್ತಿ. ಇಸ್ರೇಲ್ ಸೇರಿದಂತೆ ಸಾಕಷ್ಟು ರಾಷ್ಟçಗಳು ಶಿವಾಜಿ ಮಹರಾಜರನ್ನು ಆರಾಧಿಸುತ್ತಿವೆ ಎಂದರು.ಪ್ರತಿಯೊಬ್ಬರ ಮನೆಯಲ್ಲಿ ಶಿವಾಜಿ ಮಹರಾಜರು ಹುಟ್ಟುವ ಬದಲು ಜೀಜಾಬಾಯಿ ಹುಟ್ಟ ಬೇಕು ಆಗಿದ್ದಾಗ ಮಾತ್ರ ಪ್ರತಿಯೊಂದು ಮನೆಯಲ್ಲೂ ಇಬ್ಬರಿಂದ ಮೂರು ಜನರು ಶಿವಾಜಿ ಮಹರಾಜರು ಹುಟ್ಟಲು ಸಾಧ್ಯ ಎಂದರು.ಈ ಸಂದರ್ಭ ಹೊಟ್ಯಾಪುರ ಮಠದ ಗಿರಿಸಿದ್ದೇಶ್ವರ ಮಹಾಸ್ವಾಮಿಗಳು, ಗೋಸಾಯಿ ಮಹಾಸಂಸ್ಥಾನದ ವೇದಾಂತಚಾರ್ಯ ಮಂಜುನಾಥ ಸ್ವಾಮೀಜಿ, ಶಿವಯೋಗಿ ಶಿವಕುಮಾರ ಸ್ವಾಮೀಜಿ,ಮಾಜಿ ಗೃಹ ಸಚಿವರಾದ ಪಿ ಜಿ ಆರ್ ಸಿಂದ್ಯಾ,ಪ್ರಕಾಶ್ ರಾವ್ ಕಿ.ಸಿ, ಮಾಜಿ ಶಾಸಕರಾದ ಶಾಂತನಗೌಡ ಸೇರಿದಂತೆ ಮತ್ತಿತರರಿದ್ದರು.