ಭಾಷೆಯ ಸಾಹಾರ್ದತೆ ಸೂಕ್ಷ್ಮ ವಿಚಾರ

 • ಸಾಹಿತಿ ಪವನ ಕುಮಾರ್ ಅಭಿಪ್ರಾಯ
 • ಭಾಷೆ ಸಾಹಾರ್ದತೆ ದಿನ ಕುರಿತು ಉಪನ್ಯಾಸ
  ಸಂಜೆವಾಣಿ ವಾರ್ತೆ
  ಗಂಗಾವತಿ ನ.21: ಭಾರತೀಯ ಸಂವಿಧಾನದಲ್ಲಿ ಎಲ್ಲಾ ಭಾಷೆಗೆ ವಿಶೇಷ ಗೌರವ ನೀಡಲಾಗಿದೆ ಎಂದು ಸಾಹಿತಿ ಪವನ್ ಕುಮಾರ್ ಗುಂಡೂರು ಹೇಳಿದರು.
  ನಗರದ ಎಂ.ಎನ್.ಎಂ. ಪ್ರೌಢಶಾಲೆಯಲ್ಲಿ ಶನಿವಾರ ಜಿಲ್ಲಾ ಪಂಚಾಯತ, ಕ್ಷೇತ್ರ ಸಮಾನ್ವಯಾಧಿಕರಿಗಳು ಕಾರ್ಯಾಲಯ ಗಂಗಾವತಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ರಾಷ್ಟ್ರೀಯ ಐಕತ್ಯಾ ದಿನಾಚರಣೆಯ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಭಾಷಾ ಸೌಹಾರ್ದತಾ ದಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
  ಪ್ರಸುತ್ತ ಸನ್ನಿವೇಶದಲ್ಲಿ ಭಾಷೆಯ ಸಾಹಾರ್ದತೆ, ಸಾಮರಸ್ಯ ಕುರಿತು ಚರ್ಚೆ ಮಾಡುತ್ತಿರುವುದು ಅರ್ಥಪೂರ್ಣ ವಾದದ್ದು. ಅದರಲ್ಲಿ ಭಾಷೆ ಸಾಹಾರ್ದತೆ ವಿಚಾರ ಅತೀ ಸೂಕ್ಷ್ಮ ವಿಚಾರ. ಭಾಷೆ ತುಂಬಾ ಸರಳವಾಗಿದ್ದು, ಅಷ್ಟೇ ಆಳ ಹೊಂದಿದೆ. ಕನ್ನಡದ ಆದ್ಯ ಗ್ರಂಥ ಕವಿರಾಜ್ ಮಾರ್ಗದಲ್ಲಿ ಭಾಷೆ ಸಾಹಾರ್ದತೆ ಬಗ್ಗೆ ಮುಖ್ಯ ವಾದ ವಿಚಾರ ಚರ್ಚೆ ಮಾಡಲಾಗಿದೆ ಎಂದರು.
  ರಾಷ್ಟ್ರೀಯ ಐಕತ್ಯಾ ದಿನಾಚರಣೆಯ ಪ್ರಜ್ಞಾವಿಧಿ ಬೋಧಿಸಲಾಯಿತು.
  ಪ್ರಾರ್ಚಾಯ ಶಾಂತಪ್ಪ ಟಿ.ಸಿ., ಉಪ ಪ್ರಾರ್ಚಾಯ ಕೃಷ್ಣಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಪ್ರಭು, ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಪಿ. ಗೊಂಡಬಾಳ, ವಕೀಲರ ಸಂಘದ ಕಾರ್ಯದರ್ಶಿ ಬಿ.ವಿರೂಪಾಕ್ಷಪ್ಪ, ವಕೀಲ ನಾಗರಾಜ್ ಗುತ್ತೆದಾರ, ಟಿ.ಮಂಜುನಾಥ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.