ಭಾಷೆಯ ಭಾವೈಕ್ಯತೆ ಸರ್ವರಲ್ಲೂ ಮೆರೆಯಲಿ

ಸೊರಬ. ಫೆ.22: ಭಾಷೆಯ ಭಾವೈಕ್ಯತೆಯನ್ನ ಬೆಳೆಸುವ ಸಹೃದಯತೆಯ ಮನೋಭಾವನೆಯನ್ನು ಸರ್ವರು ಬೆಳೆಸಿಕೊಂಡಾಗ ಒಂದು ಭಾಷೆಯ ಉಳಿವು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಡಿ.ಎಸ್ .ಶಂಕರ್ ಶೇಟ್ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾತೃ ಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಂದು ಜನ ಸಮುದಾಯವು ಭಾಷೆಯ ಬಗ್ಗೆ ಅಭಿಮಾನ ಗೌರವ. ಪ್ರೀತಿ ಅಭಿವ್ಯಕ್ತಿ ಭಾವನಾತ್ಮಕತೆಯ ಭಾವನೆಗಳನ್ನು ಹೊಂದಬೇಕು ಎಂದ ಅವರು ಯಾ ರು ಭಾಷೆಯನ್ನು ರಕ್ಷಿಸುತ್ತಾರೋ ಅವರನ್ನು ಭಾಷೆಯು ರಕ್ಷಿಸುತ್ತದೆ. ಧರ್ಮದ ನೆಲಗಟ್ಟಿನಲ್ಲಿ ನಡೆಯುವ ಮಾನವನು ಧರ್ಮವನ್ನು ರಕ್ಷಿಸಿದಾಗ ಧರ್ಮವು ಅವರನ್ನುರಕ್ಷಿಸುತ್ತದೆ ಎಂದು ಹೇಳಿದರು.   ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ ಎಚ್. ವಿಶ್ವನಾಥ್ ಕಾನಡೆ ವಿಶ್ವ ಮಾತೃಭಾಷೆಯ ದಿನವನ್ನು ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು. ವಿವಿಧ ಭಾಷೆಗಳ ವೈವಿಧ್ಯತೆಯ ನಡುವೆ ಕನ್ನಡವೂ ತನ್ನದೇ ಆದ ಪ್ರಾಧ್ಯಾನತೆಯನ್ನು ಉಳಿಸಿಕೊಂಡಿದೆ. ಮಾತೃ ಭಾಷೆಯ ಗ್ರಹಿಕೆ ,ಅಭಿವ್ಯಕ್ತಿ, ಸಾಂಸ್ಕೃತಿಕ ವೈಭವ್ಯಥೆಯನ್ನು ಎಲ್ಲರೂ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕು ಎಲ್ಲಿ ಭಾಷೆಯ ಪ್ರಭಾವವಿರುತ್ತದೆಯೊ ಅಲ್ಲಿ ಅದರ ಮಹತ್ವವು ಹೆಚ್ಚಿರುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ವು ಹೇಮಲತಾ ವಹಿಸಿದ್ದರು. ಸುಧನ್ಯ ನರ್ಸಿಂಗ್ ಕಾಲೇಜಿನ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಮೇಶ್. ಬಿ, ವಿನಾಯಕ ಕಾನ ಡೆ, ಕನ್ನಡ ಸಹಾಯಕ ಪ್ರಾಧ್ಯಾಪಕ ಶಂಕರ್ ನಾಯಕ್, ಉಪನ್ಯಾಸಕಿ ಪವಿತ್ರ ಎ.ವಿ, ಮೊದಲಾದವರಿದ್ದರು.