ಭಾಷೆಗಳ ಏಳ್ಗೆಗಾಗಿ ಅಭಾಸಾಪ ಶ್ರಮಿಸುತ್ತಿದೆ-ಕೋಟಿ

ಬಾದಾಮಿ, ಏ 5: ಭಾರತದ ಎಲ್ಲ ಭಾಷೆಗಳ ಏಳಿಗೆಗೆ ಅಖಿಲ ಭಾರತ ಸಾಹಿತ್ಯ ಪರಿಷತ್ತು ಶ್ರಮಿಸುತ್ತಿದೆ. ಸಾಹಿತ್ಯ ಮಾನವನ ಜೀವನ ವಿಕಾಸದ ಕಡೆಗೆ ಒಯ್ಯುತ್ತದೆ ಎಂದು ಅ.ಭಾ.ಸಾ.ಪ. ರಾಜ್ಯ ಉಪಾಧ್ಯಕ್ಷ ಎಸ್.ಜಿ.ಕೋಟಿ ಹೇಳಿದರು.
ಅವರು ತಾ.ಪಂ.ಸಭಾಭವನದಲ್ಲಿ ಅಭಾಸಾಪ ತಾಲೂಕಾ ಪರಿಷತ್ತು ಉದ್ಘಾಟನೆ, ನೂತನ ಪದಾಧಿಕಾರಿಗಳ ಪದಗ್ರಹಣ, ದತ್ತಿನಿಧಿ ಸ್ಥಾಪನೆ ಹಾಗೂ ಪುಸ್ತಕಾವಲೋಕನ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಪಿಸಿಸಿ(ಹಿಂ.ವ.ವಿ) ರಾಜ್ಯ ಕಾರ್ಯದರ್ಶಿ ಮಹೇಶ ಎಸ್ ಹೊಸಗೌಡ್ರ ಮಾತನಾಡಿ ಸಾಹಿತ್ಯಾಭಿರುಚಿ ಎಲ್ಲರಲ್ಲಿಯೂ ಬೆಳೆಯಬೇಕು. ನಮ್ಮ ತಾಯಿಯವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ ಮಾಡಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ. ನನ್ನಿಂದ ಆಗುವ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ ಸಾಹಿತಿಗಳಿಗೆ ಇಂದು ಎಲ್ಲರಿಗೂ ಅವಕಾಶ ಸಿಗುತ್ತಿದೆ. ಸಾಹಿತ್ಯಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಅಭಾಸಾಪ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಾಧಕರು, ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಹೊಸೂರ ಸಿ.ಆರ್.ಪಿ.ಪಿ.ಟಿ.ನೀಲಗುಂದ ಇವರು ದಿಂ. ಶ್ರೀಮತಿ ಬಸಮ್ಮ ಷಣ್ಮುಖಪ್ಪ ಹೊಸಗೌಡ್ರ ಅವರ ಜೀವನ ಕಿರು ಪರಿಚಯ ಹಾಗೂ ಶಿಕ್ಷಕ ಎಸ್.ಎಚ್.ಪರಸನ್ನವರ ಇವರು ದಿಂ.ದ್ಯಾವಪ್ಪ ಜಕ್ಕಪ್ಪನ್ನವರ ಜೀವನ ಪರಿಚಯ ಕುರಿತು ದತ್ತಿ ಉಪನ್ಯಾಸ ನೀಡಿದರು. ಅ.ಭಾ.ಸಾ.ಪ ತಾಲೂಕ ಅಧ್ಯಕ್ಷ ಸದಾಶಿವ ಮರಡಿ, ತಾಲೂಕಾ ಕಸಾಪ ಅಧ್ಯಕ್ಷ ರವಿ ಕಂಗಳ ಇವರು ಮರಡಿ ಸಹೋದರರ ವಿರಚಿತ ಸಮ ಹಿಮ ಚಂದ್ರಮ ಕವನ ಸಂಕಲನ ಪುಸ್ತಕ ಅವಲೋಕನ ಮಾಡಿ ಮಾತನಾಡಿದರು. ವೇದಿಕೆಯ ಮೇಲೆ ಜಿಲ್ಲಾ ಅಭಾಸಾಪ ಅಧ್ಯಕ್ಷ ಮಹಾಂತೇಶ ಕೆ, ಕಲಾವಿದೆ ಪವಿತ್ರಾ ಜಕ್ಕಪ್ಪನವರ, ಯಲ್ಲಾಲಿಂಗ ಪೂಜಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಾಜಿ ಸದಸ್ಯ ಮಹಾಂತೇಶ ಹಟ್ಟಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಮೇಶ ಕತ್ತಿಕೈ, ಸುಷ್ಮಾ ಪಾರ್ವತಿಮಠ, ಎಲ್.ಪಿ.ಕುಲಕರ್ಣಿ, ಆರ್.ವೈ.ಪಾಟೀಲ, ಶೀಲಾ ಗೌಡರ, ಹನಮಂತ ಕುರಿ, ಜಯಶ್ರೀ ಆಲೂರ, ಶೇಖರ ಕುಂಬಾರ, ರವಿ ತಿರಕನ್ನವರ, ಶಶಿಕಲಾ ಅಂಗಡಿ, ವೆಂಕಟೇಶ ಇನಾಮದಾರ, ಆರ್.ಬಿ.ಸಂಕದಾಳ ಸೇರಿದಂತೆ ಮುಂತಾದವರು ಹಾಜರಿದ್ದರು. ಆರ್.ವೈ.ಪಾಟೀಲ ಸ್ವಾಗತಿಸಿದರು. ರಮೇಶ ಕತ್ತಿಕೈ ನಿರೂಪಿಸಿದರು. ಎಚ್.ಜಿ.ಕುರಿ ವಂದಿಸಿದರು.