ಸಂಜೆ ವಾಣಿ ವಾರ್ತೆ
ಕೊಟ್ಟೂರು: ಜು,10- ಯಾವುದೇ ಒಂದು ಭಾಷೆಯಲ್ಲಿ ಸಹಬಾಳ್ವೆ ಇರಲ್ಲ ಅದರ ಬದಲು ಹೊಸ ಸೃಷ್ಟಿಯೇ ಇರುತ್ತೆ ಎಂದು ಸಂಸ್ಕೃತಿ ಚಿಂತಕರಾದ ರಹಮತ್ ತರೀಕೆರೆ ಹೇಳಿದರು.
ಪಟ್ಟಣದ ಬಯಲು ಸಾಹಿತ್ಯ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಮರುಳಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಎರಡನೇ ದಿನದ ನಾವು ನಮ್ಮಲ್ಲಿ 2023ರ ಸಹಬಾಳ್ವೆ ಕಥನಗಳ ಸಮಾರೋಪ ಸಮಾರಂಭ ಕಾರ್ಯಕ್ರಮ ಕುರಿತು ಮಾತನಾಡಿದರು.
ಸಹಬಾಳ್ವೆ ಕೂಡಿದರ ಫಲವಾಗಿ ಅದ್ಭುತವಾದ ಭಾಷೆ ಉಗಮವಾಗುತ್ತದೆ, ಈ ಸಹಬಾಳ್ವೆ ಭಾಷೆಯ ಶೈಲಿ, ಅಲಂಕಾರ ಮೂಡಿಸುತ್ತದೆ. ಹಿಂದಿನ ಸರ್ಕಾರವು ಸಹಬಾಳ್ವೆಗೆ ದಕ್ಕೆ ಬರುವ ಕೆಲಸ ಮಾಡಿದ್ದರಿಂದ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ರಾಜಕಾರಣವು ಸಹಬಾಳ್ವೆ ಬಯಸುತ್ತದೆ. ನಿತ್ಯದ ಅನೇಕ ಹೋರಾಟದ ಭಾಗವೇ ಸಹಬಾಳ್ವೆ ಆಗಿದ್ದು, ದೇಶದ ಸಂಘರ್ಷ ಭಾಗವಾಗಿ ಕೆಲಸ ಮಾಡುತ್ತದೆ, ಬೇರೆ ಬೇರೆ ವಲಯಗಳಲ್ಲಿ ಮತ್ತು ನಾಡಿನ ಪ್ರಜ್ಞಾವಂತರು ಸಹಬಾಳ್ವೆಯನ್ನು ಕಂಡುಕೊಳ್ಳಬೇಕು. ಬಡವರಲ್ಲಿ, ಸ್ಲಂ ಏರಿಗಳಲ್ಲಿ ಹಾಗೂ ಮುಸ್ಲಿಂರು ಮಾಡುವ ವ್ಯಾಪಾರದಲ್ಲಿ ಅತೀ ಹೆಚ್ಚು ಸಹಬಾಳ್ವೆಯನ್ನು ಕಾಣುತ್ತೇವೆ. ಸಹಬಾಳ್ವೆ ಇಲ್ಲದಿದ್ದರ ಪರಿಣಾಮವಾಗಿ ಭಾರತ ದೇಶವು ಆರ್ಥಿಕವಾಗಿ ಹಿಂದುಳಿಯಲು ಕಾರಣವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುಂಚೆ ವಿಚಾರಗೋಷ್ಠಿ ಮೂರರಲ್ಲಿ “ಸಹಬಾಳ್ವೆಯ ನೆಲೆಗೊಳಿಸುವ ಬಗೆಗಳು” ಎಂಬ ವಿಷಯದ ಬಗ್ಗೆ ಸಂಸ್ಕೃತಿ ಚಿಂತಕರಾದ ಡಾ.ಜೆ ಕರಿಯಪ್ಪ ಮಾಳಿಯವರು ಮಾತನಾಡಿದರು. ಅಧ್ಯಾಪಕರಾದ ಡಾ. ಜಿ.ಕೆ ಪ್ರೇಮ ಮತ್ತು ಲೇಖಕರಾದ ಫಾತಿಮಾ ರಲಿಯಾ ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳು ಸೇರಿದಂತೆ ಸಾಹಿತ್ಯ ಅಭಿಮಾನಿಗಳು ಹಾಗೂ ಇತರರು ಉಪಸ್ಥಿತರಿದ್ದರು.
One attachment • Scanned by Gmail