ಕಾಳಗಿ :ಮಾ.25: ನೂತನ ತಾಲೂಕು ರಚನೆಗೊಂಡ ಬಳಿಕ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಕಾಳಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ, ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಶಾಂತಾಮಠ ಅವರ ಅಧ್ಯಕ್ಷತೆಯಲ್ಲಿ ಬಹಳ ಅದ್ಧೂರಿಯಿಂದ ನುಡಿ ಜಾತ್ರೆ ನಡೆಯಿತು.
ಪಟ್ಟಣದ ಶ್ರೀ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಲಿಂ. ಪೂಜ್ಯ ಶ್ರೀ ಶಿವಬಸವ ಶಿವಾಚಾರ್ಯರ ವೇದಿಕೆಯಲ್ಲಿ ಜರುಗಿದ ಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಡಾ. ಅವಿನಾಶ ಜಾಧವ್ ಉದ್ಘಾಟಿಸಿ ಮಾತನಾಡಿ, ಕನ್ನಡ ಬಾಷೆಯ ಬಗ್ಗೆ ಬಾಷಾಭಿಮಾನ ಮೂಡಿಸುವಲ್ಲಿ ಹಾಗೂ ನಾಡು-ನುಡಿಯ ಬಗ್ಗೆ ಜಾಗೃತಗೊಳಿಸುವಲ್ಲಿ ಕಸಾಪದ ಪಾತ್ರ ಪ್ರಮುಖವಿದೆ. ಕಸಾಪ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ, ಅಹಂಭಾವನೆ ತೊರೆದು ಸಮಾಜದ ಒಳಿತಿಗಾಗಿ ಸಮಾಜದ ಏಳಿಗೆಗೆಗಾಗಿ ಸಹಕಾರ ನೀಡಬೇಕು ಎಂದು ಹೇಳಿದರು. ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಪ್ರಾಮಣಿಕ ಪಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ಸಾಹಿತಿ ಶ್ರೀಮತಿ ಹನುಮಾಕ್ಷಿ ಗೋಗಿ ಶ್ರೀ ಗುರುಲಿಂಗಪ್ಪ ಪಾಟೀಲ್ ಹಾಲಹಳ್ಳಿ ವಿರಚಿತ ದಿವ್ಯ ಜ್ಞಾನ ಸಂಪುಟ-1 ಹಾಗೂ ಸಂಪುಟ-2 ಬಿಡುಗಡೆ ಗೊಳಿಸಿ ಮಾತನಾಡಿ, ಕಾಳಗಿಯ ಇತಿಹಾಸ ಭವ್ಯವಾಗಿದ್ದು, ಶೀಗ್ರದಲ್ಲಿ ಕಾಳಗಿಯ ಇತಿಹಾಸದ ಕುರಿತು ಇಲ್ಲಿನ ದೇಗುಲಗಳ ಹಿನ್ನೆಲೆ ಕುರಿತು ಪುಸ್ತಕ ಹೊರತರಲಾಗುವುದು, ಇಲ್ಲಿನ ವಾಸ್ತುಶಿಲ್ಪ, ಶಿಲ್ಪಕಲೆಗಳು, ಬೇಲೂರು ಹಳೆಬೀಡುಗಳ ಶಿಲ್ಪಕಲೆಗಳು ಮೀರಿಸುತ್ತವೆ ಎಂದು ತಿಳಿಸಿದರು. ಮುಂಬರುವ ಪೀಳಿಗೆಗೆ ಈ ನೆಲದ ಇತಿಹಾಸ ಅರಿಯಲು ಇಲ್ಲಿನ ಸ್ಮಾರಕಗಳ ಸಂರಕ್ಷಣೆ ಅಗತ್ಯವಾಗಿದೆ, ಭವ್ಯ ಇತಿಹಾಸ ವನ್ನು ಹೊಂದಿರುವ ಕಾಳಗಿಯನ್ನು ಪ್ರವಾಸಿ ತಾಣವನ್ನಾಗಿ ಮಾಡುವಲ್ಲಿ ಸರಕಾರ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಸಾಹಿತಿ ಗುರುಲಿಂಗಪ್ಪ ಪಾಟೀಲ್ ಹಾಲಹಳ್ಳಿ ಮಾತನಾಡಿ, ಅರ್ಥಪೂರ್ಣ ಕನ್ನಡ ಸಾಹಿತ್ಯ ಸಮ್ಮೇಳನ ನಿರಂತರವಾಗಿ ನಡೆಯುವ ಮೂಲಕ ಕನ್ನಡದ ನಾಡು-ನುಡಿ, ನೆಲ, ಜಲ ಗಳ ಬಗ್ಗೆ ಜಾಗೃತ ಭಾವನೆ ಮೂಡಿಸುವಂತಾಗಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಸೂಗೂರು(ಕೆ) ಪೂಜ್ಯ ಶ್ರೀ ಡಾ. ಚನ್ನರುದ್ರಮುನಿ ಶಿವಾಚಾರ್ಯ ಆಶೀರ್ವಚನ ನೀಡಿ, ಕನ್ನಡ ಭಾಷೆ, ನಾಡು, ನುಡಿಯ ರಕ್ಷಣೆಗೆ ಪ್ರತಿಯೊಬ್ಬರು ಪಣತೊಡಬೇಕು, ಪ್ರಸ್ತುತ ಕನ್ನಡ ಉಳಿಸಿ ಬೆಳೆಸಿ ಎನ್ನುವುದು ವಿಪಾರ್ಯಸದ ಸಂಗತಿಯಾಗಿದೆ, ಜಗತ್ತು ತಂತ್ರಜ್ಞಾನ ಎಷ್ಟೆ ಮುಂದುವರೆದರೂ ನಾವೂಗಳು ನಮ್ಮ ಭಾಷೆ, ಸಂಸ್ಕøತಿ, ಸಂಸ್ಕಾರ ಹಾಗೂ ನಮ್ಮತನವನ್ನು ಬಿಟ್ಟುಕೊಡಬಾರದು ಎಂದು ಹೇಳಿದರು.
ಕಾಳಗಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಶಾಂತಾಮಠ ಮಾತನಾಡಿ, ಕಾಳಗಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಬ್ಬ ಮಹಿಳೆಯನ್ನು ಗುರುತಿಸಿ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಮಹಿಳಾ ಸಮುದಾಯಕ್ಕೆ ಸಂದ ಗೌರವವಾಗಿದೆ, ಕಸಾಪ ಸಮಸ್ತ ಕನ್ನಡಿಗರನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವ ಸಾರ್ಥಕ ಕೆಲಸ ಮಾಡುತ್ತಿದೆ, ಕಾಳಗಿ ತಾಲೂಕಿನ ಬಹಳಷ್ಟು ದೇವಾಲಯಗಳು ಜೀರ್ಣಾವಸ್ಥೆಯಲ್ಲಿವೆ, ಸೂಕ್ತ ರಕ್ಷಣೆ ಇಲ್ಲದೆ ಅಳಿವಿನಂಚಿನಲ್ಲಿವೆ, ಇವುಗಳನ್ನು ಸಂರಕ್ಷಿಸುವ ದಿಸೆಯತ್ತ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಹೇಳಿದರು. ಇಲ್ಲಿನ ಇಲ್ಲಿನ ಶಿಲ್ಪಕಲೆ, ವಾಸ್ತುಶೈಲಿ ಬಹಳ ಅದ್ಬುತವಾಗಿದೆ, ಕಾಳಗಿ ತಾಲೂಕು ಶೈಕ್ಷಣೀಕವಾಗಿ ಮುಂದುವರೆಯಬೇಕು, ತಾಲೂಕಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು, ರಸ್ತೆಗಳನ್ನು ಮೇಲದರ್ಜೆಗೇರಿಸಿ ಅಭಿವೃದ್ಧಿ ಪಡಿಸಬೇಕು, ಅಗತ್ಯ ಕಚೇರಿಗಳು ಸ್ಥಾಪನೆಯಾಗಬೇಕು, ತಾಲೂಕಿನ ಪ್ರೇಕ್ಷಣಿಯ ಸ್ಥಳಗಳು ಅಭಿವೃದ್ಧಿಪಡಿಸಬೇಕು, ತಾಲೂಕಿಗೆ ಸುವ್ಯವಸ್ಥಿತ ಕ್ರೀಡಾಂಗಣ ನಿರ್ಮಾಣ ಮಾಡಬೇಕು, ಕನ್ನಡ ಭವನ ನಿರ್ಮಾಣವಾಗಬೇಕು, ಈ ಭಾಗದ ಐತಿಹಾಸಿಕ ಸ್ಥಳಗಳನ್ನು ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸುವಂತಾಗಬೇಕು ಎಂದು ಸರಕಾರಕ್ಕೆ
ಒತ್ತಾಯಿಸಿದರು.
ಸಮ್ಮೇಳನದಲ್ಲಿ ಭಾಗಿಯಾದ ಗಣ್ಯರು: ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರ ಶಿವಯೋಗಿಗಳು, ಸುಗೂರು(ಕೆ) ಪೂಜ್ಯ ಡಾ, ಚನ್ನರುದ್ರಮುನಿ ಶಿವಾಚಾರ್ಯ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಕಾಳಗಿ ಕಸಾಪ ಅಧ್ಯಕ್ಷ ಸಂತೋಷ ಕುಡಳ್ಳಿ, ಸತೀಶ್ಚಂದ್ರ ದುಲೇಪೇಟ, ರಾಜೇಂದ್ರ ಬಾಬು ಹೀರಾಪೂರ, ಶ್ರೀಕಾಂತ ಕದಂ, ಸಂತೋಷ ನರನಾಳ, ಸುಧಾರಾಣಿ ಚಿದ್ರಿ, ಶಿವರಾಜ ಚೇಂಗಟಾ, ಭೀಮಶಂಕರ ಅಂಕಲಗಿ, ಪಂಚಾಕ್ಷರಯ್ಯ ಮಠಪತಿ, ರಾಜೇಶ ಗುತ್ತೇದಾರ, ರಾಮಲಿಂಗರೆಡ್ಡಿ ದೇಶಮುಖ, ರೇವಣಸಿದ್ದಪ್ಪ ಮಾಸ್ಟರ್, ಶರಣಗೌಡ ಪೋಲಿಸ ಪಾಟೀಲ್, ಸುಭಾಷ ಕದಂ, ಮಲ್ಲಿನಾಥ ಪಾಟೀಲ್ ಕಾಳಗಿ, ಶಿವಶರಣಪ್ಪ ಗುತ್ತೇದಾರ, ಶಿವಶರಣಪ್ಪ ಕಮಲಾಪೂರ, ಪರಮೇಶ್ವರ ಮಡಿವಾಳ, ಕಲ್ಯಾಣರಾವ ಡೊಣ್ಣೂರ, ಬಸವರಾಜ ಪಾಟೀಲ್ ಹೇರೂರ, ಪ್ರಶಾಂತ ಕದಂ, ರಾಜಕುಮಾರ ರಾಜಾಪೂರ, ಸಂತೋಷ ಜಾಧವ್, ಮುಡುಬಿ ಗುಂಡೇರಾವ್, ಸಿದ್ದಲಿಂಗ ಬಾಳಿ, ಸಿದ್ದರೆಡ್ಡಿ ಸಂಗೋಳಗಿ, ಅಂಬದಾಸ ಮದನೆ, ಸಿದ್ದಣ್ಣಾ ಶೆಟ್ಟಿ ಸೇರದಂತೆ ಅನೇಕರಿದ್ದರು.