ಭಾಷಣ ಸ್ಪರ್ಧೆ: ಪ್ರಥಮ ಸ್ಥಾನ


ಹುಬ್ಬಳ್ಳಿ, ಡಿ6: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಂತೋಷನಗರದಲ್ಲಿರುವ ಚೈತ್ರಾ ಕನ್ನಡ ಕಾನ್ವೆಂಟ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಹಿರೇಮಠ ಇವಳು ವಿಶ್ವಕನ್ನಡಿಗ ನ್ಯೂಸ್ ಚಾನೆಲ್ ನವರು ಆಯೋಜಿಸಿದ ರಾಜ್ಯಮಟ್ಟದ “ನನ್ನ ಕನಸಿನ ಕರ್ನಾಟಕ” ಕುರಿತು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಇವಳಿಗೆ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆಂದು ಚೇತನಕುಮಾರ ಹಿರೇಮಠ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.