ಭಾಷಣದಿಂದ ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಪರಿಚಯಿಸಿದ ವಿವೇಕಾನಂದರು -ನ್ಯಾಯಾಧೀಶ ಕೆ.ಎನ್ . ನಾಗೇಶ.

ಕೂಡ್ಲಿಗಿ.ಜ.13:- ಅಮೇರಿಕಾದ ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿದ ಸ್ವಾಮಿ ವಿವೇಕಾನಂದರು ಯುವ ಪೀಳಿಗೆಯನ್ನು ಹುರಿದುಂಬಿಸುವ ಹಾಗೂ ದೇಶದ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪರಿಚಯಿಸುವಲ್ಲಿ ಮುಂದಾಗಿದ್ದರು ಎಂದು ಕೂಡ್ಲಿಗಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಕೆ ಎನ್ ನಾಗೇಶ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕೂಡ್ಲಿಗಿ ತಾಲೂಕು ಕಾನೂನು ಸೇವೆಗಳ ಸಮಿತಿ. ತಾಲೂಕು ವಕೀಲರ ಸಂಘ. ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಯುವಕರ ದಿನದ ಪ್ರಯುಕ್ತ ವಸತಿನಿಲಯದ ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಅರಿವು -ನೆರವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಭಾರತೀಯರು ಸುಸಂಸ್ಕೃತರು ಅವರ ಜೀವನ ಇಡೀ ವಿಶ್ವಕ್ಕೆ ಮಾದರಿ ಎಂಬುದನ್ನು ಭಾಷಣದ ಮೂಲಕ ವಿವೇಕಾನಂದರು ಪರಿಚಯಿಸಿದರು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿವಿಲ್ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ ವಹಿಸಿ ಮಾತನಾಡುತ್ತ ಸ್ವಾಮಿ ವಿವೇಕಾನಂದರ ಆದರ್ಶ ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಿ ಎಂದು ತಿಳಿಸಿದರು. ಪ್ಯಾನಲ್ ವಕೀಲರಾದ ಸಿ. ವಿರುಪಾಕ್ಷಿ ಮಾತನಾಡಿ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಉಪನ್ಯಾಸ ನೀಡಿದರು .
ಮುಖ್ಯ ಅತಿಥಿಗಳಾಗಿ ಜಿ ಹೊನ್ನೂರಪ್ಪ ಅಧ್ಯಕ್ಷರು ತಾಲೂಕು ವಕೀಲರ ಸಂಘ ಕೂಡ್ಲಿಗಿ.ಹೊಸವಡ್ರು ಅಣ್ಣೇಶ ಸಹಾಯಕ ಸರ್ಕಾರಿ ಅಭಿಯೋಜಕರು. ಮತ್ತು ಬಿಸಿಎಂ ಕೂಡ್ಲಿಗಿ ತಾಲೂಕು ಕಲ್ಯಾಣಾಧಿಕಾರಿ ಪಂಪಾಪತಿ ಹಾಜರಿದ್ದರು.
ಈ ಸಂದರ್ಭದಲ್ಲಿ ನಿಲಯ ಮೇಲ್ವಿಚಾರಕರಾದ ಮಲ್ಲಪ್ಪ ಮತ್ತು ಗೋವಿಂದಪ್ಪ, ಅಂಜಿನಪ್ಪ, ಕುಮಾರಸ್ವಾಮಿ, ಮತ್ತು ಸಿಬ್ಬಂದಿಗಳಾದ ರೇವಣ್ಣ. ಪ್ರದೀಪ್ ಕುಮಾರ್.ಶ್ರುತಿ.ಸುಧಾ, ಕಾವ್ಯ ಮತ್ತು ಬಿಸಿಎಂ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ದೊಡ್ಡಬಸಪ್ಪ ನಿರೂಪಿಸಿದರು. ಸುಪುತ್ರ ಸ್ವಾಗತಿಸಿದರು ಮಂಜುನಾಥವಂದನಾರ್ಪಣೆ ಸಲ್ಲಿಸಿದರು