ಭಾಷಣಕ್ಕೆ ವಿಪಕ್ಷಗಳ ಅಡ್ಡಿ: ಸದನದಿಂದ ಹೊರ ನಡೆದ ಗೌರ್‍ನರ್

ಚೆನ್ನೈ ,ಜ.೯- ತಮಿಳುನಾಡನ್ನು ತಮಿಳಿಗಂ ಎಂದು ಹೆಸರು ಬದಲಾಯಿಸುವುದೂ ಸೇರಿದಂತೆ ಚಳಿಗಾಲದ ಅಧಿವೇಶನದ ಮೊದಲ ದಿನದ ರಾಜ್ಯಪಾಲ ಆರ್ ಎನ್ ಆಡಿದ ಮಾತುಗಳಿಗೆ ಆಡಳಿತಾರೂಡ ಡಿಎಂಕೆ ಹಾಗು ಅದರ ಮಿತ್ರ ಪಕ್ಷಗಳು ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯಿಂದ ವಿಧಾನಸಭೆ ಅಕ್ಷರಶಃ ಕಾದ ಕೆಂಡದಂತಾದ ಘಟನೆಗೆ ಸಾಕ್ಷಿಯಾಗಿ ರಾಜ್ಯಪಾಲರು ಸದನದಿಂದ ಹೊರನಡೆದ ಪ್ರಸಂಗ ನಡೆಯಿತು.
ಸರ್ಕಾರ ಸಿದ್ದಪಡಿಸಿದ ಭಾಷಣ ಓದುವ ಬದಲು ರಾಜ್ಯಪಾಲರು ಅನಗತ್ಯವಾಗಿ ಹಲವು ಮಾತುಗಳಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿರೋಧ ವ್ಯಕ್ತಪಡಿಸಿ ರಾಜ್ಯಪಾಲರ ಭಾಷಣ ವಿರೋಧಿಸಿ, ಸರ್ಕಾರ ಮಾಡಿಕೊಟ್ಟ ಭಾಷಣದ ಪ್ರತಿ ಅಂಗೀರಿಸುವ ನಿರ್ಧಾರ ಕೈಗೊಳ್ಳಲಾಯಿತು.
ಇದರಿಂದ ಮುಜಗರಕ್ಕೆ ಒಳಗಾದ ರಾಜ್ಯಪಾಲ ಆರ್. ಎನ್ ರವಿ ವಿಧಾನಸಭಯಿಂದ ಹೊರ ನಡೆದರು. ಡಿಎಂಕೆ,ಕಾಂಗ್ರೆಸ್ ಸೇರಿದಂತೆ ಇನ್ನಿತರೆ ಮಿತ್ರ ಪಕ್ಷಗಳು ರಾಜ್ಯಪಾಲರ ರಾಜೀನಾಮೆಗೆ ಆಗ್ರಹಿಸಿದರು.ರಾಜ್ಯಪಾಲರು ವಿಧಾನಸಭೆ ಸದಸ್ಯರನ್ನುದ್ದೇಶಿಸಿ ಮಾಡಿದ ಭಾಷಣದ ಕೆಲ ಭಾಗ ಬಿಟ್ಟು ಅಲ್ಲಲ್ಲಿ ತಮ್ಮ ಹೇಳಿಕೆ ಉಲ್ಲೇಖಿಸಿದ ರಾಜ್ಯಪಾಲ ಆರ್‌ಎನ್ ರವಿ ಭಾಷಣಕ್ಕೆ ಆಡಳಿತಾರೂಢ ಡಿಎಂಕೆ, ಮಿತ್ರ ಪಕ್ಷಗಳಾದ ಕಾಂಗ್ರೆಸ್, ವಿದುತಲೈ ಚಿರುತೈಗಲ್ ಕಚ್ಚಿ ರಾಜ್ಯಪಾಲರ ನಡೆಯನ್ನು ವಿರೋಧಿಸಿದರು. ಇದರಿಂದ ಮುಜುಗರಕ್ಕೊಳಗಾದ ರಾಜ್ಯಪಾಲರ ಅರ್. ಎನ್ ರವಿ ಅವರು ಸಭೆಯಿಂದ ಹೊರ ನಡೆದರು.ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನೇತೃತ್ವದ ಮೈತ್ರಿಕೂಟದ ಶಾಸಕರು ದ್ರಾವಿಡ ಪಕ್ಷಗಳ ೫೦ ವರ್ಷಗಳ ಆಡಳಿತವನ್ನು ಪ್ರತಿಗಾಮಿ ಎಂದು ಕರೆದಿದುದ್ದು ಅಲ್ಲದೆ ಮತ್ತು ರಾಜ್ಯದ ಮರುನಾಮಕರಣಕ್ಕೆ ಸೂಚಿಸಿದ್ದಕ್ಕಾಗಿ ರಾಜ್ಯಪಾಲರ ವಿರುದ್ದ ಆಡಳಿತರೂಢ ಸದಸ್ಯರು ತಿರುಗಿ ಬಿದ್ದರು.
ವಿವಾದ ಹೊಸದಲ್ಲ:
೨೦ ವಿಧೇಯಕಗಳನ್ನು ಅಂಗೀಕರಿಸಲು ನಿರಾಕರಿಸಿರುವುದು ಸೇರಿದಂತೆ ಹಲವು ವಿಷಯಗಳ ಕುರಿತು ರಾಜ್ಯ ಸರ್ಕಾರ ಮತ್ತು ರವಿ ನಡುವೆ ವಾಗ್ವಾದ ನಡೆದಿದೆ. ರವಿ ಅವರು ಭಾರತೀಯ ಜನತಾ ಪಕ್ಷದ ಹಿಂದುತ್ವ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಆರೋಪಿಸಿವೆ.ರವಿ ಅವರು ರಾಜ್ಯ ರಾಜಕಾರಣದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಡಿಎಂಕೆ ಸದಸ್ಯರು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಮಿಳುನಾಡಿಗೆ ತಮಿಳಗಂ ಎಂದು ಮರುನಾಮಕರಣ ಮಾಡಬೇಕು ತಮಿಳುನಾಡು ಎನ್ನುವ ಪದ ಸರಿಯಲ್ಲ. ಇದು ತಪ್ಪು ಅಭ್ಯಾಸ” ದೊಂದಿಗೆ ಪ್ರತಿಗಾಮಿ ರಾಜಕೀಯವಿದೆ ಎಂದು ಅವರು ಹೇಳಿದರು.
ರವಿ ಅವರು ರಾಜ್ಯದ ಹೆಸರನ್ನು ಬದಲಾಯಿಸಲು ಸೂಚಿಸುತ್ತಿದ್ದಂತೆ ಡಿಎಂಕೆ ಸದಸ್ಯರು ತಿರುಗೇಟು ನೀಡಿದೆ.
ಈ ಹೇಳಿಕೆಯನ್ನು ಸಮರ್ಥಿಸಿಕೊಂಡ ಬಿಜೆಪಿ, ರಾಜ್ಯದ ಭೂಭಾಗವನ್ನು ತಮಿಳು ಸಾಹಿತ್ಯದಲ್ಲಿ ತಮಿಳಗಂ ಮತ್ತು ತಮಿಳುನಾಡು ಎಂದು ಉಲ್ಲೇಖಿಸಲಾಗಿದೆ ಎಂದಿದೆ.