ಭಾವ ಸುಗಮ ಸಂಗೀತ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.26: ತಾಲೂಕಿನ ದೇಶನೂರು ಗ್ರಾಮದ ನೆಹರು ವಿದ್ಯಾಮಂದಿರದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ವರ ಮಾಧುರಿ ಕಲಾ ಟ್ರಸ್ಟ್ ಸಹಯೋಗದಲ್ಲಿ ಭಾವಸಂಗಮ ಕಾರ್ಯಕ್ರಮ ನಡೆಯಿತು.
ಶಿಕ್ಷಕ ಮಂಜುನಾಥ ಅಂಗಡಿ ಮಾತನಾಡಿ ಗ್ರಾಮೀಣರು ನಿತ್ಯ ತಮ್ಮ ಕೃಷಿ ಚಟುವಟಿಕೆಗಳು, ಹಬ್ಬ ಹರಿದಿನಗಳಲ್ಲಿ ಜಾನಪದ,ತತ್ವ ಪದಗಳನ್ನು ಹಾಡುತ್ತಿರುವುದರಿಂದ ಮಕ್ಕಳು ಅವರದೇ ದಾಟಿಯಲ್ಲಿ ಹಾಡುತ್ತಾರೆ, ಇಂತಹ ಮಕ್ಕಳಿಗೆ ವೇದಿಕೆ ಕಲ್ಪಸಿಕೊಟ್ಟಲ್ಲಿ ಪ್ರತಿಭೆ ಅನಾವರಣಗೊಳಿಸುತ್ತಾರೆ, ಗ್ರಾಮೀಣ ಭಾಗದಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯುವುದರಿಂದ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸಿಕೊಟ್ಟಂತೆ ಆಗುತ್ತದೆ ಎಂದು ತಿಳಿಸಿದರು.
ಭಾವ ಸಂಗಮದಲ್ಲಿ ಕುಮಾರಿ ವಿಯಲಕ್ಷ್ಮಿ ಹಕ್ಕಿ ಹಾಡುತ್ತಿದೆ ಭಾವಗೀತೆಗೆ ಸುಗಮ ಸಂಗೀತ ಸೂಚಿಸಿದರು. ಶಿವಾನಂದಪ್ಪ ಹಾರ್ಮೋನಿಯಂ ನುಡಿಸಿದರು, ಅಜಾತಸ್ವಾಮಿ ತಬಲ ಸಾಥ ನೀಡುದರು.
ಮುಖ್ಯಗರು ಬಿ.ಜರೀನಾ, ಗಾಯಕ, ಶಿಲ್ಪ ಕಲಾವಿದ ಎಸ್.ನಾಗರಾಜ, ಮುಖಂಡರಾದ ಟಿ.ರಾಘಣ್ಣ ಶೆಟ್ಟಿ, ಅರಳಿ ಮಲ್ಲಿಕಾರ್ಜುನ, ಜಿ.ಸುದರ್ಶನ ರೆಡ್ಡಿ, ಚಂದಪ್ಪ ಶೆಟ್ಟಿ, ಶಾಂತಮೂರ್ತಿ ಸ್ವಾಮಿ ಇದ್ದರು.