
ಲಿಂಗಸುಗೂರು,ಫೆ.೨೨- ಪಡಿತರ ಆಹಾರ ಸರಬರಾಜು ಇಲಾಖೆಯಲ್ಲಿ ಆಹಾರ ಸಾಮಾಗ್ರಿಗಳ ವ್ಯವಸ್ಥಾಪಕರಾಗಿ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆಸಲ್ಲಿಸುತ್ತಿರುವ ಸರಕಾರಿ ನೌಕರರಿಗೆ ರಾಜ್ಯ ಮಟ್ಟದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಕೊಡಮಾಡುವ ಭಾವೈಕ್ಯ ರತ್ನ ಪ್ರಶಸ್ತಿಗೆ ಆಯ್ಕೆ ಎಮ್.ಎ. ಹುಸೇನ್ ಇವರು ಆಯ್ಕೆ ಮಾಡಲಾಗಿದೆ.
ನಮ್ಮ ಭಾವೈಕ್ಯ ಕನ್ನಡ ನಾಡಿನ ಪರಿಸರ ಸಂರಕ್ಷಣೆ, ವಿವಿಧ ದಾಸೋಹ, ಮಾನವ ಧರ್ಮ ಪರಿಪಾಲನೆ ಮತ್ತು ಸಾಹಿತ್ಯ, ಸಂಗೀತ, ಕಲೆ, ಗ್ರಾಮೀಣಾಭಿವೃದ್ಧಿ ಜನಪದ ಕೃಷಿ ಕ್ರೀಡೆ, ಅಧ್ಯಾತ್ಮಿಕ ಹಾಗೂ ಪ್ರಗತಿಪರ ಚಿಂತನೆ ಮತ್ತು ರಾಜಕೀಯ, ಚಲನಚಿತ್ರ, ಪತ್ರಿಕಾ ಮಾಧ್ಯಮ, ಕಾನೂನು ಪಾಲನೆ, ನಾಡು ನುಡಿ, ಕನ್ನಡ ಸಂಕ್ಷರಿ ಸಾಮಾಜಿಕ ಮತ್ತು ಜನ ಕಲ್ಯಾಣ ಸೇವಾ ಸಾಧನೆಗೈದ ಸಾಧಕರಾದ ಭಾವೈಕ್ಯ ರತ್ನ ಪ್ರಶಸ್ತಿಗೆ ಆಯ್ಕೆ ಎಮ್.ಎ. ಹುಸೇನ್. ಇವರು ಲಿಂಗಸುಗೂರ ಪಡಿತರ ಆಹಾರ ಸರಬರಾಜು ಇಲಾಖೆ ನೌಕರರು ಇವರ ಸೇವೆಗಾಗಿ ಗಣನೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಪರೋಪಕಾರಿ ಜಾತ್ಯಾತೀಯ ಮಾನವತೆಗಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ದಿ. ೦೧-೦೩-೨೦೨೩ ಬುಧವಾರ ಗಂಗಾವತಿ ಮಹಾನಗರದ ಶ್ರೀ ಸಾಯಿ ರೆಸಿಡೆನ್ಸಿ ಸಂಭಾಗಣದಲ್ಲಿ ನಡೆಯುವ ನಮ್ಮ ಭಾರತ ಪುಸ್ತಕ ಲೋಕಾರ್ಪಣೆ ಭಾವೈಕ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.