ಭಾವೈಕ್ಯದ ಬದುಕಿನಿಂದ ದೇಶಕ್ಕೆ ಹಿರಿಮೆ


ಧಾರವಾಡ ಮಾ.24 : ಮನುಕುಲದ ಜೀವನ ವಿಧಾನವು ಜಾತ್ಯಾತೀತ ಭಾವನೆಗಳ ಸ್ನೇಹ, ಸಮನ್ವಯ, ಸಹಕಾರದ ನೆಲೆಯಲ್ಲಿ ಭಾವೈಕ್ಯದ ಬದುಕಿನಿಂದ ಕೂಡಿದಾಗ ದೇಶಕ್ಕೆ ಹಿರಿಮೆ ಪ್ರಾಪ್ತವಾಗುತ್ತದೆ ಎಂದು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಹೇಳಿದರು.
ಅವರು ತಾಲೂಕಿನ ಕಲಕೇರಿ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಚಟುವಟಿಕೆಗಳನ್ನು ಉದ್ಘಾಟಿಸಿ ಮತನಾಡುತ್ತಿದ್ದರು. ಕಲಕೇರಿ ಸರಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೆ.ಎಸ್. ಬಂಗಾರಿ ಮಾತನಾಡಿ, ದೇಶ ಸೇವೆಯೇ ಈಶ ಸೇವೆಯಾಗಿದ್ದು, ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಸದೃಢ ಭಾರತ ನಿರ್ಮಾಣದಲ್ಲಿ ಯುವಶಕ್ತಿಯನ್ನು ತೊಡಗಿಸುವಲ್ಲಿ ಎನ್.ಎಸ್.ಎಸ್. ಸಹಕಾರಿಯಾಗಿದೆ ಎಂದರು.
ಕಲಕೇರಿ ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಮಡಿವಾಳೆಪ್ಪ ಭಾವಕ್ಕನವರ, ಫಕ್ಕೀರಪ್ಪ ರಾಟ್ಟೊಳ್ಳಿ, ನಿಂಗಪ್ಪ ಪಾಗೋಜಿ, ಗ್ರಾಮೀಣ ತಾಲೂಕು ವಲಯದ ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿ ತಹವೀನಾ ಸೈಯ್ಯದ್, ಶಿಕ್ಷಣ ಸಂಯೋಜಕ ಎಂ.ಎನ್. ಸತ್ತೂರ ಹಾಗೂ ಸಿ.ಆರ್.ಪಿ. ಡಿ.ಎನ್. ಕಮ್ಮಾರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಉಮಾ ರಂಗಪ್ಪನವರ, ಶೇಖರ ಶಂಭು, ಪ್ರಶಾಂತ ವಿಭೂತಿ, ಕವಯಿತ್ರಿ ಮಂಜುಳಾ ಪ್ಯಾಟಿಶೆಟ್ಟರ, ಪ್ರಶಾಂತ ಝಳಕೆ, ಕವಿತಾ ಮುದನೂರ, ಮಂಜುಳಾ ಜಾವೂರ, ತಾರಾ ಚಕಾರಿ ಇದ್ದರು.
ಮಧು ಕರೆತ್ತಿನ ಮತ್ತು ಸಂಗಡಿಗರು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸುವ ಸ್ಫರ್ಧೆಯನ್ನು ಆಯೋಜಿಸಲಾಗಿತ್ತು.