ಭಾವೈಕ್ಯದ ಕವಿ ಜಿ.ಎಸ್.ಶಿವರುದ್ರಪ್ಪ

ಮೈಸೂರು,ಡಿ.23:- ಯಾವುದೇ ಪಂಥಕ್ಕೆ ಒಳಪಡದೇ ಅವರದ್ದೇ ಆದ ಮಾನವ ಪಂಥವನ್ನು ಹಿಡಿದು ಸಮನ್ವಯದ ಕವಿಯಾಗಿ ಕನ್ನಡಿಗರ ಎದೆಯಲ್ಲಿ ತುಂಬಿರತಕ್ಕಂತಹವರು ಕವಿ ಜಿ.ಎಸ್.ಶಿವರುದ್ರಪ್ಪನವರು ಎಂದು ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.
ಮೈಸೂರಿನ ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿಂದು ಸಾಹಿತ್ಯ ವೈಭವ ನಾಡೋಜ ಜಿ.ಎಸ್.ಶಿವರುದ್ರಪ್ಪ ಅವರ ಬದುಕು ಬರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಚಾರ ಮಂಡಿಸಿದರು. ಸರ್ಕಾರದ ಗಮನವನ್ನು ಸೆಳೆಯತಕ್ಕ ಕೆಲಸಗಳು ಆಗಬೇಕು. ಯಾಕೆಂದರೆ ನಾವು ಮತದಾರರು ಓಟು ಹಾಕಿದ್ದೇವೆ. ಬೇಕಾದವರ ಕಿವಿ ಹಿಂಡಿ ಇನ್ನೂ ಬೇಕು ಅಂತ ಹೇಳಿದರೆ ಬೇರೆ ರೀತಿಯಲ್ಲಿ ದಬಾಯಿಸಿ ಮಾಡುವಂತದ್ದು ಇರಬೇಕು ಈ ಸಮಾಜದಲ್ಲಿ ಅದು ಆಗುತ್ತಿಲ್ಲ. ಶಿವರುದ್ರಪ್ಪನವರಂತ ಕವಿ ಪಡೆದದ್ದು ಪುಣ್ಯ. ಅವರು ಬರೀ ಕವಿಯಾಗಿರಲಿಲ್ಲ, ಭಾವೈಕ್ಯದ ಕವಿ, ಸಾಮರಸ್ಯದ ಕವಿ, ಬೇರೆಯವರು ಇದ್ದಾರೆ ನಮ್ಮಲ್ಲಿ, ಬೇಕಾದಷ್ಟು ಕವಿಗಳಿದ್ದಾರೆ. ಅವರು ಯಾವ ಪಂಥಕ್ಕೂ ಸೇರಿರಲ್ಲ, ಅವರದ್ದೇ ಆದ ಪಂಥ, ಮನುಷ್ಯ ಪಂಥ, ಮಾನವ ಪಂಥ, ಇವತ್ತು ನಾವು ಎಡಪಂಥೀಯರು, ಬಲಪಂಥೀಯರು ರಾಜಾರೋಷವಾಗಿ ಹೇಳಿಕೊಳ್ಳುತ್ತಾರೆ. ನಾವು ಬಲಪಂಥ, ನಾವು ಎಡಪಂಥ ಅಂತ, ಸಾಹಿತ್ಯ ಪಂಥ, ಮಾನವಪಂಥ ಅಂತ ಯಾರೂ ಕೂಡ ಹೇಳಲ್ಲ, ಹಾಗಾಗಿ ಅವರು ಯಾವುದೇ ಪಂಥಕ್ಕೆ ಒಳಪಡದೇ ಅವರದ್ದೇ ಆದ ಮಾನವ ಪಂಥವನ್ನು ಹಿಡಿದು ಸಮನ್ವಯದ ಕವಿಯಾಗಿ, ಸಾಮರಸ್ಯದ ಕವಿಯಾಗಿ ಇಡೀ ಕನ್ನಡ ನಾಡಿನ, ಕನ್ನಡಿಗರ ಎದೆ ತುಂಬಿರತಕ್ಕಂಯತಹವರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಬಿ.ಆರ್.ನಟರಾಜ ಜೋಯೀಸ್ ಅವರಿಗೆ ಡಾ.ಜಿ.ಎಸ್.ಶಿವರುದ್ರಪ್ಪನವರ ಸಾಮಾಜಿಕ ಸದ್ಭಾವನಾ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಪರ ಚಿಂತಕ ಅರವಿಂದ ಶರ್ಮ, ಪರಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್, ಶ್ರೀಗರಿ ಟ್ರಸ್ಟ್ ಗ್ರಹೇಶ್ವರ ಗಾರುಡಿಗೇಂದ್ರಂ, ಮಾಧ್ಯಮ ವಕ್ತಾರ ಮಹೇಶ್ ಕೆ, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಎಲ್.ಯಮುನಾ ಮತ್ತಿತರರು ಉಪಸ್ಥಿತರಿದ್ದರು.