ಭಾವೈಕ್ಯತೆ  ರಾಷ್ಟ್ರೋತ್ಥಾನದ ಮಾರ್ಗದರ್ಶಿ- ಪ್ರೊ.ಚನ್ನಪ್ಪ ಪಲ್ಲಾಗಟ್ಟೆ 

ಸಂಜೆವಾಣಿ ವಾರ್ತೆ

ದಾವಣಗೆರೆ. ಡಿ.30; ಭಾವೈಕ್ಯತೆಯನ್ನು ಜೀವನದಲ್ಲಿ  ಅಳವಡಿಸಿಕೊಂಡು ಅದನ್ನು ಪಾಲಿಸುವುದರ ಮೂಲಕ ನಮ್ಮ ರಾಷ್ಟ್ರವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯ ಬಹುದು. ಯುವಕರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು ಅವರಲ್ಲಿ  ಸೇವಾ ಮನೋಭಾವ, ಸಂಯಮ, ಧೈರ್ಯ, ತ್ಯಾಗ, ಸರಳತೆಯನ್ನು ಮೂಡಿಸುವ ಅನಿವಾರ್ಯತೆ ಇದೆ ಎಂದು ಭಾರತ ಸೇವಾದಳ ದಾವಣಗೆರೆ ಜಿಲ್ಲಾಧ್ಯಕ್ಷರಾದ ಪ್ರೊ.ಚನ್ನಪ್ಪ ಪಲ್ಲಾಗಟ್ಪೆ ತಿಳಿಸಿದರು.ಅವರು ಸೇವಾದಳದ ಶತಮಾನೋತ್ಸವ ಸ್ಮರಣೆಯ ಅಂಗವಾಗಿ ದಾವಣಗೆರೆ ತಾಲ್ಲೂಕಿನ ಭಾರತ ಸೇವಾದಳ ನೇತಾಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲೆಬೇತೂರು ಇಲ್ಲಿ  ಭಾರತ ಸೇವಾದಳ ಸಪ್ತಾಹ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶ ಮತ್ತು ಕಾರ್ಯಕ್ರಮಗಳ ತಳಹದಿಯ ಮೇಲೆ ಯುವಕರನ್ನು ಸಂಘಟಿಸಿ ಸೇವಾದಳದ ಶಿಕ್ಷಣದ ಮೂಲಕ ಪೂರ್ಣ ಸೇವಾ ಮನೋಭಾವನೆ ಮೂಡಿಸುವ ಹಾಗೂ ಆರೋಗ್ಯ ಮತ್ತು ಶಾರೀರಿಕ ಧೃಢತೆಯನ್ನು ಬಲಪಡಿಸುವ  ಕಾರ್ಯವನ್ನು ಮಾಡಲು ಕರೆಕೊಟ್ಟರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಮತಿ ಸುಮಿತ್ರಮ್ಮ ಮಾತನಾಡಿ ಮಕ್ಕಳಿಗೆ ಶಿಸ್ತಿನ ಬಗ್ಗೆ ತಿಳಿಸಿದರು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭವಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀಯುತ ವಿಜಯ್ ವಹಿಸಿದ್ದರು. ವೇದಿಕೆಯಲ್ಲಿ ಭಾರತ ಸೇವಾದಳ ದಾವಣಗೆರೆ ತಾಲ್ಲೂಕು ಅಧ್ಯಕ್ಷ ಶ್ರೀಯುತ ಹಾಸಭಾವಿ ಕರಿಬಸಪ್ಪ, ಶಿಕ್ಷಕರಾದ ಶ್ರೀಯುತ ಗಣೇಶಯ್ಯ, ಶ್ರೀಮತಿಯರಾದ ಕವಿತಮ್ಮ, ವಸಂತಮ್ಮ ಹಾಜರಿದ್ದು,  ದೈಹಿಕ ಶಿಕ್ಷಕ   ಎ.ಆರ್.ಗೋಪಾಲಪ್ಪ ಎಲ್ಲರನ್ನೂ  ಸ್ವಾಗತಿಸಿದರು.. ಕವಿತಮ್ಮ ಎಲ್ಲರಿಗೂ ವಂದನೆ ಅರ್ಪಿಸಿದರು. ಭಾರತ ಸೇವಾದಳ ದಾವಣಗೆರೆ ಜಿಲ್ಲಾ ಸಂಘಟಕರಾದ  ಫಕ್ಕೀರಗೌಡ ಹಳೇಮನಿ ಕಾರ್ಯ ಕ್ರಮದ ನಿರ್ವಹಣೆ ಜೊತೆಗೆ  ದೇಶಭಕ್ತಿ ಗೀತೆ ಕಾರ್ಯ ಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಭಾರತ ರಾಷ್ಟ್ರ, ಧ್ವಜ ಬಿಡಿಸುವ ಮತ್ತು ವಿವಿಧ ಸ್ಪರ್ಧೆ ಮತ್ತು ವಿಜೇತರಿಗೆ ಬಹುಮಾನ ನೀಡಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.