ಭಾವೈಕ್ಯತೆ ರತ್ನ ಪ್ರಶಸ್ತಿ: ಸನ್ಮಾನ

ಹುಬ್ಬಳ್ಳಿ, ನ14: ನಗರದ ಭಾರತ ಏಕತಾ ವೇದಿಕೆ ವತಿಯಿಂದ ಸರ್ವಧರ್ಮ ಸಮಭಾವ ಸಮ್ಮೇಳನ ಕಾರ್ಯಕ್ರಮದಲ್ಲಿ ಅಲ್ ಹಾಜ್ ಸಿ ಎಸ್ ಮೆಹಬೂಬ್ ಬಾಷಾ ಅವರಿಗೆ ಉದ್ಯೋಗದ ಜೊತೆಗೆ ಮಂದಿರ, ಮಸೀದಿ, ಚರ್ಚ್ ಧಾರ್ಮಿಕ ಸ್ಥಳಗಳಲ್ಲಿ ಪ್ರತಿವರ್ಷವೂ ಉಚಿತವಾಗಿ ಕೊಳವೆ ಬಾವಿಯನ್ನು ಕೊರೆದು ಧಾರ್ಮಿಕವಾಗಿ ಭಾವೈಕ್ಯತೆ ಮೆರೆದಿದ್ದಕ್ಕಾಗಿ ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಮಾಡಿರುವಂತಹ ಅತ್ಯುತ್ತಮ ಸಮಾಜ ಸೇವೆಯನ್ನು ಗುರುತಿಸಿ ” ಭಾವೈಕ್ಯತೆ ರತ್ನ “ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಪ್ರಯುಕ್ತ ಕರ್ನಾಟಕ ರಾಜ್ಯ ನದಾಫ ಹಿತಾಭಿವೃದ್ಧಿ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಸಂಘದ ಎಲ್ಲ ಪದಾಧಿಕಾರಿಗಳು ಸೇರಿ ರಾಜ್ಯಾಧ್ಯಕ್ಷರಾದ ಅಲ್ ಹಾಜ್ ಸಿ ಎಸ್ ಮೆಹಬೂಬ್ ಬಾಷಾರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಅಬ್ದುಲ್ ರಹಿಮಾನ್ ತಲವಾಯಿ, ಹುಸೇನ್ ಸಾಬ್ ಇಲಕಲ್, ಬಾಬುಸಾಬ್ ನದಾಫ್, ಅಲ್ಲಾಭಕ್ಷ ನದಾಫ, ಖಾಜಾ ಹುಸೇನ ನದಾಫ, ಉಸ್ಮಾನ್ ಬೆಂಗೇರಿ, ಖಾಸಿಮ್ ಸಾಬ್ ಪಿಂಜಾರ, ಹಾಜಿ ಎಂ ಎಚ್ ನದಾಫ್, ಹಸನ್ ಸಾಬ್ ನದಾಫ್, ಶರೀಫ್ ಸಾಬ್ ನದಾಫ್,ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.