ಭಾವೈಕ್ಯತೆಯ ಮೊಹರಂ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿ : ಸಿಪಿಐ ನಾಯ್ಕೋಡಿ

ಅಥಣಿ :ಜು.21: ಅಥಣಿ ಶಿವಯೋಗಿಗಳ ನಾಡು ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ಪುಣ್ಯಕ್ಷೇತ್ರವಾಗಿದ್ದು ಈ ಪಟ್ಟಣದಲ್ಲಿ ಇಲ್ಲಿಯವರೆಗೆ ಹಬ್ಬಹರಿದಿನಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದ ಬಗ್ಗೆ ಉದಾಹರಣೆಗಳೇ ಇಲ್ಲ, ಎಲ್ಲ ಹಬ್ಬಗಳನ್ನು ಜಾತಿ ಮತ ಧರ್ಮದ ಭೇದವಿಲ್ಲದೆ ಎಲ್ಲರೂ ಸೌಹಾರ್ದತೆಯಿಂದ ಆಚರಣೆ ಮಾಡುತ್ತ ಬಂದಿದ್ದೀರಿ, ಮೊಹರಂ ಹಬ್ಬವು ಹಿಂದೂ, ಮುಸ್ಲಿಂರ ಭಾವೈಕ್ಯತೆಯ ಸಂಕೇತದ ಹಬ್ಬವಾಗಿದೆ. ಈ ಹಬ್ಬದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪ್ರತಿಯೊಬ್ಬರು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು, ಎಂದು ಸಿಪಿಐ ರವೀಂದ್ರ ನಾಯ್ಕೋಡಿ ಮನವಿ ಮಾಡಿದರು,
ಅವರು ಇದೇ 29 ರಂದು ನಡೆಯಲಿರುವ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಪೆÇಲೀಸ್ ಠಾಣೆಯ ಮುಂಭಾಗದಲ್ಲಿ ಸಿಪಿಐ ರವೀಂದ್ರ ನಾಯ್ಕೋಡಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಪೂರ್ವಭಾವಿ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಾಲೂಕಿನಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಹಬ್ಬಗಳನ್ನು ಭಾವೈಕ್ಯತೆಯಿಂದ ಆಚರಿಸುತ್ತಿರುವುದು ಶ್ಲಾಘನೀಯ. ಆದರೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೆÇಲೀಸ್ ಇಲಾಖೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸೋಷಿಯಲ್ ಮೀಡಿಯಾಗಳಲ್ಲಿ ಯಾವದೇ ರೀತಿಯ ಶಾಂತಿಭಂಗವಾಗುವಂತಹ
ಪೆÇೀಸ್ಟ್ ಗಳನ್ನು ಹರಿ ಬಿಡುವುದಾಗಲಿ ಸ್ಟೇಟಸ್ ಇಡುವುದಾಗಲಿ ಮಾಡಿದರೆ ಅಂತವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಹಾಗೂ ಪಟ್ಟಣದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ಯಾವದೇ ಅಹಿತಕರ ಘಟನೆ ನಡೆದರೆ ಅದರಲ್ಲಿ ದಾಖಲಾಗುತ್ತದೆ ತಕ್ಷಣ ನಮ್ಮ ಗಮನಕ್ಕೆ ಬರುತ್ತದೆ ಆದ ಕಾರಣ ಯಾರು ಕೂಡ ಯಾವದೇ ರೀತಿಯ ಅಪರಾಧ ಚಟುವಟಿಕೆಗಳಿಗೆ ಆಸ್ಪದ ಕೊಡಬಾರದು, ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನುಹಾಗೂ ಕಂಟ್ರೋಲ್ ರೂಮನ್ನು ಚಿಕ್ಕೋಡಿ ಲೋಕಸಭಾ ಸದಸ್ಯರು ಹಾಗೂ ಸ್ಥಳೀಯ ಶಾಸಕರು ಉದ್ಘಾಟನೆ ನೆರವೇರಿಸುವರು ಎಂದರು
ಈ ವೇಳೆ ಪಿಎಸ್ ಐಗಳಾದ. ಶಿವಶಂಕರ ಮುಕರಿ, ಲಕ್ಷ್ಮಿ ಬಿರಾದರ, ಪೆÇಲೀಸ್ ಸಿಬ್ಬಂದಿಗಳಾದ ಸಂಜು ಮಾಳವಗೋಳ, ಎ. ಎಸ್. ಭಾಲದಾರ, ರಮೇಶ ಹಾದಿಮನಿ, ಎಸ್. ಎ. ಭಾಂಗಿ, ನ್ಯಾಯವಾದಿ ವಿನಯ ಪಾಟೀಲ, ಮುಸ್ಲಿಂ ಮುಖಂಡ ಸಯ್ಯದಅಮೀನ್ ಗದ್ಯಾಳ, ಆಸೀಫ್ ತಾಂಬೊಳಿ, ಮಂಜು ಹೊಳಿಕಟ್ಟಿ, ಬಂದೇನವಾಜ್ ಅಬ್ದುಲ್ ಚಿಂಚಲಿ, ಗುಲಾಬ ನಾಲಬಂದ, ಶಬ್ಬೀರ ಸಾತಬಚ್ಚೆ, ಸುಭಾಷ ಸಾಳುಂಕೆ, ನಿಲೇಶ ಪನಾಳಕರ್ ಸೇರಿದಂತೆ ತಾಲೂಕಿನ ಹಲವು ಗ್ರಾಮದ ಹಿರಿಯರು ಹಾಗೂ ಮುಖಂಡರು ಭಾಗವಹಿಸಿದ್ದರು,