ಭಾವೈಕ್ಯತೆಯಿಂದ ಬಾಳೋಣ ದೇಶವನ್ನು ಕಟ್ಟೋಣ: ಡಾ.ಮಂಜುಷಾ ಪಾಟೀಲ

ಆಲಮೇಲ:ಆ.17:ನಮ್ಮ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಿ ಸ್ವತಂತ್ರರಾಗಲು ನಮ್ಮ ಮಹಾನ ನಾಯಕರು ತ್ಯಾಗ ಮತ್ತು ಬಲಿದಾನವನ್ನು ನೀಡಿದ್ದಾರೆ, ಭಾರತೀಯರಾದ ನಾವು ನಮ್ಮಲಿರುವ ದ್ವೇಷ ಭಾವನೆಯನ್ನು ತೊಡೆದು ಹಾಕಿ ಭಾವೈಕ್ಯತೆಯಿಂದ ಬಾಳಿ ಭಾರತ ಮಾತೆಯ ಮಕ್ಕಳಾಗಿ ಬಾಳೋಣ ದೇಶವನ್ನು ಕಟ್ಟೋಣ ಎಂದು ಡಾ.ಮಂಜುಷಾ ಪಾಟೀಲ ಹೇಳಿದರು

ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.

ಸಂಸ್ಥೆ ಅಧ್ಯಕ್ಷರಾದ ವಿಜಯಕುಮಾರ ಆರ್.ಯಂಟಮಾನ ಮಾತನಾಡಿ ಸ್ವಾತಂತ್ರ್ಯ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿ ದೇಶಕ್ಕಾಗಿ ಹೋರಾಡಿದ ಮಹಾತ್ಮರನ್ನೂ ಅಷ್ಟೇ ನೆನಸದೆ ಪ್ರತಿ ಭಾರತೀಯರು ಸಂವಿಧಾನದ ಮಹತ್ವ ಅರಿತು ಗೌರವಿಸಿ ಒಂದಾಗಿ ಬಾಳಬೇಕೆಂದು ಎಂದರು.

 ಈ ಸಂದರ್ಭದಲ್ಲಿ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು,ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಆರ್.ಯಂಟಮಾನ, ಮಲ್ಲಿಕಾರ್ಜುನ ಮೇಲಿನಮನಿ, ಅಪ್ಪು ಶೆಟ್ಟಿ, ಅಬ್ದುಲಗನಿ ದೇವರಮನಿ, ಶಿವಾನಂದ ಕಲ್ಲೂರ, ಸಿದ್ದನಗೌಡ ಪಾಟೀಲ, ಶ್ರೀಶೈಲ ಅಗಸರ, ಅಪ್ಪಾಸಾಹೇಬ ಕಲ್ಲೂರ, ಮುಖ್ಯಗುರುಗಳಾದ ಅನಂತನಾಗ ಪಾಟೀಲ,ಶಿಕ್ಷಕರಾದ ಅಜಿತ ಇನಾಮದಾರ, ಮಲಿಕ ಮುಲ್ಲಾ, ವಿರೇಶ ಕಲ್ಲೂರಮಠ ಸೇರಿದಂತೆ ಮಕ್ಕಳು ಮತ್ತು ಅವರ ಪಾಲಕರಿದ್ದರು.