ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಫೆ.17; ಪಟ್ಟಣದ ಅಂಬ್ಲಿ ದೊಡ್ಡಭರ್ಮಪ್ಪ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ “ರಾಷ್ಟೀಯ ಭಾವೈಕ್ಯತಾ ಶಿಬಿರದಲ್ಲಿ” ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.ಕಾಲೇಜು ವಿದ್ಯಾರ್ಥಿ ಕಾರ್ಯದರ್ಶಿ ರೇಣುಕಪ್ರಸಾದ ಕಲ್ಮಠ, ವಿದ್ಯಾರ್ಥಿಗಳಾದ ನಂದೀಶ್, ಕುಶಾಲ್, ಸುವರ್ಣ, ಸಂಪ್ರೀತಾ, ಮಾನಸ, ಹರ್ಷವರ್ಧನ್, ಮಹೇಂದ್ರ, ಪ್ರಶಸ್ತಿ ಪಡೆದುಕೊಂಡರು. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕೋರಿ ವಿರೂಪಾಕ್ಷಪ್ಪ, ಪ್ರಾಂಶುಪಾಲರಾದ ಡಾ.ಸಿದ್ದಲಿಂಗಮೂರ್ತಿ, ಅರುಂಡಿ ನಾಗರಾಜ್, ಪುಟ್ಟಸ್ವಾಮಿ, ಎಸ್.ಆನಂದ್ ಡಾ.ರಾಜಶೇಖರಯ್ಯ ಇತರರು ಇದ್ದರು.