ಭಾವೈಕ್ಯತಾ ನಿಧಿ ಆಲ್ದಾಳ ಕವಿ : ಬಿಬ್ಬಳ್ಳಿ

ಕಲಬುರಗಿ ಏ.20:ಜಾತಿ, ಮತ, ಭೇದ ಮತ್ತು ಧರ್ಮಗಳನ್ನು ಮೀರಿ ಒಬ್ಬ ಲೇಖಕ ಬೆಳೆಯಬೇಕು ಎಂಬುದಕ್ಕೆ ತಾಜಾ ಉದಾಹರಣೆಯಂತೆ ಬದುಕಿದ ನಾಟಕಕಾರ ಎಲ್.ಬಿ.ಕೆ.ಆಲ್ದಾಳ ಅವರು ನಿಜವಾಗಿಯೂ ಭಾವೈಕ್ಯತಾ ನಿಧಿ ಎಂದು ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಹಿರಿಯ ಕಲಾವಿದರಾದ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಹೇಳಿದರು.

ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪ್ರಾಂಗಣದಲ್ಲಿ ಹಿರಿಯ ನಾಟಕಕಾರ, ಗುಬ್ಬಿ ವೀರಣ್ಣ ರಂಗ ಪುರಸ್ಕøತ ರಂಗಕರ್ಮಿ, ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ ಪಡೆದಿದ್ದ ಆಲ್ದಾಳ ಕವಿಗಳ ನಿಧನದ ಹಿನ್ನೆಲೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೇಡಂ ತಾಲೂಕಿನ ನಾಚವಾರ ಮತ್ತು ಹಂಗನಳ್ಳಿ ಗ್ರಾಮಕ್ಕೆ ಅತ್ಯಂತ ನಿಕಟ ನಚಿಟು ಹೊಂದಿದ್ದ ಆಲ್ದಾಳ ಅವರು, ಸೇಡಂನ ಪೂಜ್ಯ ಶ್ರೀ ಸಪ್ಪಣ್ಣಾರ್ಯ ಶಿವಯೋಗಿಗಳ ಕುರಿತು ನಾಟಕ ಬರೆದುಕೊಟ್ಟಿದ್ದನ್ನು ನೆನಪಿಸಿ, ನಾಟಕದ ಪ್ರದರ್ಶನದ ಸಂದರ್ಭದಲ್ಲಿ ಎರಡು ದಿನ ಪೂರ್ಣ ಪ್ರಮಾಣದ ನಾಟಕವನ್ನು ನೋಡಿ, ಜೀವನ ಸಾರ್ಥಕವಾಯಿತು ಎಂದು ಅಭಿಮಾನದಿಂದ ಹೇಳಿದ್ದನ್ನು ಪ್ರಸ್ತಾಪಿಸಿದರು.

ಇಸ್ಲಾಂ ಧರ್ಮದವರಾದರೂ ಆಲ್ದಾಳ ಅವರು ವೀರಶೈವ ಪರಂಪರೆಯ ಆಚರಣೆಯಲ್ಲಿ ತೊಡಗಿಸಿಕೊಂಡು, ಶರಣರ ನಾಟಕಗಳನ್ನೇ ಹೆಚ್ಚು ಬರೆದುಕೊಟ್ಟಿದ್ದಾರೆ. ವಚನಗಳನ್ನು ಬರೆದು, ತಪೋವನ ಮಠಾಧೀಶ ಎಂಬ ಅಂಕಿತನಾಮ ಇಟ್ಟಿದ್ದಾರೆ. ಹೀಗೆ ಭಾವೈಕ್ಯತೆಯ ನಿಧಿ ಆಲ್ದಾಳ ಅವರನ್ನು ಕಳೆದುಕೊಂಡ ರಂಗಭೂಮಿ ಕ್ಷೇತ್ರ ಮತ್ತು ಸಾಹಿತ್ಯ ಲೋಕ ನಿಜಕ್ಕೂ ಬಡವಾಗಿದೆ ಎಚಿದರು.

ಪೂಜ್ಯ ಶ್ರೀ ಶಿವಶಂಕರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಮಾತನಾಡಿ, ಶರಣ ಚಿಂತನ ಎಂಬ ಕೃತಿಯನ್ನು ಬರೆದುಕೊಟ್ಟಿದ್ದ ಆಲ್ದಾಳ ಅವರು ನಮ್ಮ ಕುಟುಂಬದ ಸದಸ್ಯರಂತಿದ್ದರು.

ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ರಂಗಸಂಪನ್ನರು ಮಾಲಿಕೆಯಡಿ ಆಲ್ದಾಳ ಕುರಿತು ಪುಸ್ತಕ ಬರೆದ ಲೇಖಕ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅವರು ಮಾತನಾಡಿ,ರಂಗ ಸಂತ ಜಂಗಮ ಎಂದು ಖ್ಯಾತಿ ಪಡೆದಿದ್ದ ಆಲ್ದಾಳ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮ್ಮೇಳನ ಅಧ್ಯಕ್ಷತೆಯ ಗೌರವ ಪಡೆದಿದ್ದು ತಮ್ಮ ಅವಧಿಯಲ್ಲಿ ಎಂದು ಅಭಿಮಾನದಿಂದ ಹೇಳಿದರು.

ರಂಗ ನಿರ್ದೇಶಕ ಸೂರ್ಯಕಾಂತ ಹಂಗನಳ್ಳಿ, ಪ್ರಾಸ್ತಾವಿಕ ಮಾತನಾಡಿದ ಹಿರಿಯ ಕವಿ ವೀರಯ್ಯ ಸ್ವಾಮಿ ಮೂಲಿಮನಿ, ವಿಠ್ಠಲ್ ಬರಮಕರ್, ಸುಲೋಚನಾ ಸ್ವಾಮಿ ಮಾತನಾಡಿ, ಆಲ್ದಾಳ ಅವರ ಬದುಕು ಮತ್ತು ರಂಗಭೂಮಿಗೆ ಕೊಟ್ಟ ಕೊಡುಗೆಯನ್ನು ಸ್ಮರಿಸಿದರು. ಹಿರಿಯ ವಕೀಲರಾದ ಶರಣಬಸಪ್ಪ ಹಾಗರಗಿ, ರಂಗ ಕಲಾವಿದರಾದ ಮಲ್ಲಣ್ಣ ಬಂಟನಳ್ಳಿ, ಸುನೀಲ ನಿರ್ಣಿ, ಸುಭಾಶ ಕಾಳಗಿ, ಶ್ರೀಪಾದ ಜೋಶಿ, ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಮೇಳಕುಂದಾ, ರಾಚಣ್ಣ ಬಳಗಾರ, ಶಿವಶರಣಪ್ಪ ಯಂಪಳ್ಳಿ, ತ್ರಿಪುಂಡಯ್ಯ ಸ್ವಾಮಿ ಮುಗನೂರ, ಗುರುಲಿಂಗಯ್ಯ ಸ್ವಾಮಿ, ಚೆನ್ನಬಸು ಭಾಗವಹಿಸಿದ್ದರು. ಶಿವಕುಮಾರ ಹಿರೇಮಠ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿದರು. ನಂತರ ಒಂದು ನಿಮಿಷ ಮೌನ ಆಚರಿಸಿ ಶ್ರದ್ದಾಂಜಲಿ ಸಲ್ಲಿಸಿದರು.