ಭಾವಪೂರ್ಣ ಶ್ರದ್ಧಾಂಜಲಿ

ಚನ್ನಮ್ಮನ ಕಿತ್ತೂರ,ಏ 26: ನಾಡು ಕಂಡ ನೇರ, ದಿಟ್ಟ, ಪ್ರಾಮಾಣಿಕ ರಾಜಕಾರಣಿ ಎಂದೆ ಖ್ಯಾತರಾದ ಮಾಜಿ ಸಚಿವ ಹಾಗೂ ಶಾಸಕ ಮತ್ತು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ, ಡಿ.ಬಿ.ಇನಾಮದಾರವರಿಗೆ ಮ.ಸ.ಸ.ಕಾ.(ನಿ) ಮುಗಟಖಾನ ಹುಬ್ಬಳ್ಳಿ ಆಡಳಿತ ಮಂಡಳಿ, ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗ, ರೈತ ಬಾಂಧವರು, ಸೇರಿಕೊಂಡು ಕಾರ್ಖಾನೆಯ ಆವರಣದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
ಈ ವೇಳೆ ಉಪಾಧ್ಯಕ್ಷೆ ಲಕ್ಷ್ಮೀ ಅರಳಿಕಟ್ಟಿ, ವ್ಯವಸ್ಥಾಪಕ ನಿರ್ದೇಶಕ ವೀರೇಶ ಹೂಲಿಕಟ್ಟಿ, ಕಛೇರಿ ಅಧೀಕ್ಷಕ ಬಸವರಾಜ ಪಾಗಾದ, ನಿರ್ದೇಶಕರುಗಳಾದ ಬಸವರಾಜ ಪುಂಡಿ, ಸಂಜೀವ ಹುಬಳೆಪ್ಪನವರ, ಸಿದ್ದಪ್ಪ ದೂರಪ್ಪನವರ, ಅಶೋಕ ಬೆಂಡಿಗೇರಿ, ಬಸವರಾಜ ಬೆಂಡಿಗೇರಿ, ಮಂಜುನಾಥ ಪಾಟೀಲ, ಭದ್ರತಾ ವಿಭಾಗ ಈರಪ್ಪಾ ವಣ್ಣೂರ, ಎಲ್ಲ ವಿಭಾಗದ ಮುಖ್ಯಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.