ಭಾವನೆಗಳ ಜಾಗ್ರತಗೊಳಿಸುವ ಶಕ್ತಿ ಕಾವ್ಯಕ್ಕಿದೆ: ಮಹಾಗಾಂವ್ಕರ್

ಬೀದರ್:ಜ.14: ‘ಕಾವ್ಯಕ್ಕೆ ಭಾವನೆಗಳನ್ನು ಜಾಗೃತಗೊಳಿಸುವ ಶಕ್ತಿ ಇದೆ. ಭಾವನೆಯು ಕವಿಯಲ್ಲಿ ಊಹೆ ಮಾಡಲಾಗದಷ್ಟು ಸುಂದರ ಕಲ್ಪನೆ ಅನಾವರಣಗೊಳ್ಳುವಂತೆ ಮಾಡುತ್ತದೆ’ ಎಂದು ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಅಭಿಪ್ರಾಯಪಟ್ಟರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಸಮೀಪದ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಾಟ್ಯಶ್ರೀ ನೃತ್ಯಾಲಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಸಾಮಾನ್ಯ ಸಂಘ ಸಂಸ್ಥೆಗಳ ಸಾಂಸ್ಥಿಕ ಚಟುವಟಿಕೆಗಳ ಧನ ಸಹಾಯದೊಂದಿಗೆ ಆಯೋಜಿಸಿದ್ದ ಆಶು ಕವಿ ಗೋಷ್ಠಿ ಹಾಗೂ ಸಂಗೀತ ನೃತ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕವಿತೆಗಳಲ್ಲಿ ಕವಿಗಳ ಭಾವನೆಗಳೇ ಅನಾವರಣಗೊಳ್ಳುತ್ತವೆ. ರಾಷ್ಟ್ರಕವಿ ಕುವೆಂಪು ಅವರು ಪ್ರಕೃತಿಗೆ ಸಂಬಂಧಿಸಿದ ಕವಿತೆಗಳನ್ನೇ ಹೆಚ್ಚು ಬರೆದಿದ್ದಾರೆ. ಪರಿಸರ ಪ್ರೇಮವನ್ನು ಬಿಂಬಿಸಿದ್ದಾರೆ’ ಎಂದು ತಿಳಿಸಿದರು.

‘ಹಿಂದೆ ಕವಿತೆ ಬರೆಯುವವರು ಬೆಳಗಿನ ಜಾವ ಎದ್ದು ಕವಿತೆಗಳನ್ನು ಬರೆಯುತ್ತಿದ್ದರು. ಆಶು ಕವಿಗೋಷ್ಠಿ ವಿನೂತನ, ವಿಭಿನ್ನವಾಗಿದೆ. ಕಾರ್ಯಕ್ರಮಕ್ಕೆ ಬಂದಾಗ ಏನೂ ಇರುವುದಿಲ್ಲ. ಬರೆಯಲು ಶುರು ಮಾಡಿದ ನಂತರ ಎಲ್ಲವೂ ಸರಾಗವಾಗಿ ನಡೆದು ಹೋಗುತ್ತದೆ. ಇಲ್ಲಿಯೂ ಅದೇ ಆಗಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ವಿದ್ಯಾ ಪಾಟೀಲ ಮಾತನಾಡಿ, ‘ಕಲ್ಪನೆಯ ಲೋಕದಲ್ಲಿ ಕರೆದೊಯ್ಯುವುದೇ ನಿಜವಾದ ಸಾಹಿತ್ಯ. ಬದುಕಿಗೆ ಹತ್ತಿರವಾದ ಸಾಹಿತ್ಯ ಜ್ಞಾನ ಮಟ್ಟವನ್ನು ಹೆಚ್ಚಿಸಲು ಸಹ ನೆರವಾಗುತ್ತದೆ’ ಎಂದರು.

‘ಸಂಗೀತ, ನೃತ್ಯ ಕಲೆಗಳು ಮನಸ್ಸಿಗೆ ಮುದ ನೀಡುತ್ತವೆ. ಪ್ರತಿಯೊಬ್ಬರಿಗೂ ವೃತ್ತಿ ಬದುಕಿನೊಂದಿಗೆ ಕೆಲ ಹವ್ಯಾಸಗಳು ಇರಬೇಕು. ಬೀದರ್‍ನಲ್ಲಿ ಅನೇಕ ಕಡೆ ಸಂಗೀತ, ನೃತ್ಯ ಶಾಲೆಗಳು ತೆರೆದುಕೊಂಡಿವೆ. ಬಿಡುವಿನ ಸಮಯದಲ್ಲಿ ಸಂಗೀತ, ನೃತ್ಯ ಕಲೆ ಕಲಿಯುವ ಆಸಕ್ತಿ ತೋರಬೇಕು’ ಎಂದು ಹೇಳಿದರು.

ಹಿರಿಯ ಪತ್ರಕರ್ತ ಚಂದ್ರಕಾಂತ ಮಸಾನಿ ಮಾತನಾಡಿ, ‘ಹೊಸ ಬರಹಗಾರರಿಗೆ ಪ್ರಜಾವಾಣಿ, ಸುಧಾ ಹಾಗೂ ಮಯೂರದಲ್ಲಿ ಬರೆಯಲು ಅವಕಾಶ ಇದೆ. ಪ್ರಜಾವಾಣಿ ಅಮೃತ ಮಹೋತ್ಸವದ ಪ್ರಯುಕ್ತ ವರ್ಷ ಪೂರ್ತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಿ ಪೆÇ್ರೀತ್ಸಾಹಿಸಿದೆ’ ಎಂದು ತಿಳಿಸಿದರು.

‘ಪ್ರಜಾವಾಣಿ ಬಳಗದ ವತಿಯಿಂದಲೇ ಈಗಾಗಲೇ ಬೀದರ್‍ನಲ್ಲಿ ಗುಡ್ಡಗಾಡು ಓಟ, ಹಾಸ್ಯ ಸಂಜೆ, ಬೆಳಂದಿಗಳ ಕಾರ್ಯಕ್ರಮ, ಮಕ್ಕಳ ಹಬ್ಬ ನಡೆಸಲಾದೆ. ಪತ್ರಿಕೆಯು ವೃತ್ತಿ ಮಾರ್ಗದರ್ಶನ ಕಾಯಾಗಾರ ಆಯೋಜಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗ ಬಯಸುವವರಿಗೆ ನೆರವಾಗಿದೆ’ ಎಂದು ಹೇಳಿದರು.

ಕರ್ನಾಟಕ ಸರ್ಕಾರಿ ಕಾಲೇಜು ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ವೀರಶೆಟ್ಟಿ ಮೈಲೂರಕರ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಕಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಉಪಸ್ಥಿತರಿದ್ದರು.

ಭಾನುಪ್ರಿಯಾ ಅರಳಿ ಸುಗಮ ಸಂಗೀತ, ಭಾಗ್ಯಲಕ್ಷ್ಮಿ ಗುರುಮೂರ್ತಿ ದೇವರ ನಾಮ, ರೇಣುಕಾ ಎನ್.ಜಿ ಜಾನಪದ ಗಾಯನ, ಮಯೂರಿ ಭರತ ನಾಟ್ಯ, ಪ್ರಿಯಾಂಕ ಜಾನಪದ ನೃತ್ಯ ಪ್ರದರ್ಶಿಸಿದರು.

ಕವಿಗಳಾದ ಎಂ.ಜಿ.ಗಂಗನಪಳ್ಳಿ, ಸುನೀತಾ ಕೂಡ್ಲಿಕರ್, ನಿಜಲಿಂಗ ರಗಟೆ, ಸ್ವ???ಪರಾಣಿ ನಾಗೂರೆ, ಶ್ರೇಯಾ ಮಹೇಂದ್ರಕರ್, ಕುಮಾರ ಪವನ್ ಆಶು ಕವಿಗೋಷ್ಠಿ ಯಲ್ಲಿ ಕವನ ವಾಚಿಸಿದರು.

ಕೆ.ಸತ್ಯಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮೂಲಗೆ ನಿರೂಪಿಸಿದರು. ದೇವಿದಾಸ ಜೋಶಿ ವಂದಿಸಿದರು.