ಭಾವನಾತ್ಮಕ ವಿಷಯಗಳ ಮೂಲಕ ರಾಜಕೀಯ:ಬಿಜೆಪಿ ವಿರುದ್ದ ಪ್ರಿಯಾಂಕ ವಾಗ್ದಾಳಿ

ಕೊಪ್ಪಳ,ಮೇ.4- ಜನರಿಗೆ ಉದ್ಯೋಗ, ಅಭಿವೃದ್ಧಿ ಕಲ್ಪಿಸದ ಬಿಜೆಪಿ ನಾಯಕರು ಧರ್ಮ, ಭಾವಾನತ್ಮಾಕ ವಿಷಯಗಳನ್ನು ಮುಂದಿಟ್ಟು ರಾಜಕೀಯ ಮಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರು ನನಗೆ ಬೈದಿದ್ದಾರೆ, ಹಲವು ಬಾರಿ ಅವಮಾನವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಲೆಕ್ಕ ಹಾಕುತ್ತಾರೆ. ಇವರು ತಮ್ಮನ್ನು ಬೈದಿದ್ದಾರೆ ಎಂದು ಲೆಕ್ಕ ಇಡುತ್ತಿದ್ದಾರೆ. ನಿತ್ಯ ದೇಶದ ಜನರು ನೂರಾರು ಸಂಕಷ್ಟಕ್ಕೆ ಸಿಲಿಕಿದ್ದಾರೆ. ಜನರ ಸಮಸ್ಯೆ ಗೋಳು ಕೇಳಿದ್ದಾರೆಯೇ ಎಂದು ಪ್ರಧಾನಿ ವಿರುದ್ದವೂ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳದ ಕನಕಗಿರಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದ ಅವರು ಡ ಕಾರ್ಮಿಕ, ಕೃಷಿಕ, ಕೂಲಿ ಕಾರ್ಮಿಕ ನಾಳೆಯ ದಿನಗಳ ಬಗ್ಗೆ ಚಿಂತಿತನಾಗುತ್ತನೆ, ಅವರಲ್ಲಿ ಹಣವಿಲ್ಲ, ಅವರ ಜೀವನ ಸಂಕಷ್ಟದಲ್ಲಿ ಸಾಗುತ್ತಿದೆ. ಈ ಬಗ್ಗೆ ಬಿಜೆಪಿ ಕನಿಷ್ಟ ಚಿಂತನೆಯನ್ನೂ ನಡೆಸಿಲ್ಲ ಎಂದು ದೂರಿದರು.

ರಾಜ್ಯದ ಜನರ ಭವಿಷ್ಯದ ಬಗ್ಗೆ, ನಿಮ್ಮ ಕ್ಷೇತ್ರಗಳ ಬಗ್ಗೆ, ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ನೀವು ಜಗರೂಕರಾಗಿರಿ. ಕಾಂಗ್ರಸ್ ಪಕ್ಷಕ್ಕೆ ಮತನೀಡಿ, ಈ ಸಲ ಬಹುಮತದಿಂದ 150 ಸೀಟನ್ನು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಕನಕಗಿರಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ತಂಗಡಗಿ ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕೆಂದು ಕರೆ ನೀಡಿದ್ದಾರೆ.

ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನವೇ ಕಾಂಗ್ರೆಸ್ ಪಕ್ಷ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಆದೇಶ ಹೊರಡಸಿಸಲಾಗುವುದು ಎಂದು ತಿಳಿಸಿದ್ದಾರೆ.

ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಮಾಸಿಕ ಗೌರವಧನ 15 ಸಾವಿರ ರೂಗೆ ಹಾಗೂ ಮಿನಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಗೌರವಧನ 10 ಸಾವಿರ ರೂಗೆ ಹೆಚ್ಚಿಸಲಾಗುವುದು. ಕೋವಿಡ್ ಸಂಕಷ್ಟ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 8 ಸಾವಿರ ರೂ, ಬಿಸಿಯೂಟ ನೌಕರರಿಗೆ 5 ಸಾವಿರ ರೂ ಗೌರವಧನ ನೀಡಲಾಗುವುದು. ನಿವೃತ್ತಿಯ ಆದಾಗ ಅವರಿಗೆ 3 ಲಕ್ಷ ಪಿಂಚನಿ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತರು ನಿವೃತ್ತಿ ಆದಾಗ 2 ಲಕ್ಷ ಪಿಂಚನಿ ಕೊಡಲಾಗುತ್ತದೆ. ಎಂದು ಹೇಳಿದ್ದಾರೆ.

ರೈತರು ಬೇರೆಯವರ ಹೊಲದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರಿಗೆ 500 ಕೋಟಿ ರೂ ಅವರುಗಾಗಿ ಮೀಸಲಡಲಿದ್ದೇವೆ. ನಾವು ನುಡಿದಂತೆ ನಡೆಯುತ್ತೇವೆ ಎಂದಿದ್ದಾರೆ,

ನಿಮ್ಮೆಲ್ಲರ ಗುರಿ, ಭವಿಷ್ಯ ಭದ್ರಗೊಳಿಸುವ, ನಿಮ್ಮ ಜೀವನವನ್ನು ಸುಂದರ ಮಾಡುವ ನಿಮ್ಮ ಅಭುದ್ಯಯಕ್ಕಾಗಿ ಯಾರೂ ನಿಮ್ಮ ಪರ ಕೆಲಸ ಮಾಡುತ್ತಾರೋ ಅವರತ್ತ ಇರಲಿ. ಮೇ 10 ರಂದು ಮತದಾನ ಮಾಡಲು ಹೋಗುವ ಮೊದಲು ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ನ್ನು ಒಮ್ಮೆ ನೋಡಿ, ಬೆಲೆಯೇರಿಕೆಯಿಂದಾಗಿ ಎಷ್ಟು ಹೆಚ್ಚಾಗಿದೆ ಅದನ್ನು ನೋಡಿ ಲೆಕ್ಕ ಹಾಕಿ ನೀವು ಮತ ಹಾಕಿ ಎಂದು ನಿರ್ಧರಿಸಿ ಎಂದು ಅವರು ಮನವಿ ಮಾಡಿದ್ದಾರೆ.