ಭಾವನಾತ್ಮಕವಾಗಿ ಮತದಾರರನ್ನು ಕಟ್ಟಿಹಾಕಿದಕ್ಕೆ ಬಿಜೆಪಿಗೆ ಹಿನ್ನಡೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.16 ಕ್ಷೇತ್ರದಲ್ಲಿ ಮತದಾರರನ್ನು ಭಾವನಾತ್ಮಕವಾಗಿ ಕಟ್ಟಿಹಾಕುವ ಮೂಲಕ ಜೆಡಿಎಸ್ ಗೆಲುವು ಸಾಧಿಸಿದೆ. ಇದರಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಬಲ್ಲಾಹುಣಿಸಿ ರಾಮಣ್ಣ ಹೇಳಿದರು .
 ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಕೂಡಲೇ ಕಣ್ಣೀರು ಹಾಕಿ ಬೇರೆ ಪಕ್ಷದ ಟಿಕೆಟ್ ಪಡೆದುಕೊಂಡು ನಮ್ಮ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಅವರ ಜೊತೆ ಕೈಜೋಡಿಸಿದ್ದೆ ನಮ್ಮ ಬಿಜೆಪಿ ಪಕ್ಷ ಸೋಲಬೇಕಾಯಿತು. ಇದರ ಬಗ್ಗೆ ಹೈಕಮಾಂಡ್ ನಲ್ಲಿ ನಾಯಕರ ಗಮನಕ್ಕೆ ತಂದು ಅವರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದರು.
 ಮಂಡಲ ಅಧ್ಯಕ್ಷ ವೀರೇಶ್ವರ ಸ್ವಾಮಿ ಮಾತನಾಡಿ ಚುನಾವಣೆಯ ಮುಂಚೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲವರ್ಧನೆ ಮಾಡಲಾಗಿತ್ತು. ಹಲವಾರು ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಂಡರು ಪಕ್ಷದ ಬಲಗೊಳ್ಳುತ್ತಿದ್ದಂತೆ ಅವರನ್ನು ಹೈಜಾಕ್ ಮಾಡಿ ಕನ್ನಡಗೆ ಕಳೆದುಕೊಂಡಿದ್ದೆ ಪಕ್ಷಕ್ಕೆ ಹಿನ್ನಡೆಯಾಯಿತು. ಇವರಿಗೆ ಸಾರ್ಥ ನೀಡಿದ ಜೆಪಿ ಪದಾಧಿಕಾರಿಗಳು ಮತ್ತು ಮುಖಂಡರ ವಿರುದ್ಧ  ನಾಯಕರಿಗೆ ತಿಳಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಮಾಡಲಾಗುವುದು ಎಂದರು.
 ಈ ಸಂದರ್ಭದಲ್ಲಿ ಮುಟುಗನಹಳ್ಳಿ ಕೊಟ್ರೇಶ್, ಬುಡ್ಡಿ ಬಸವರಾಜ್, ಕೃಷ್ಣ ನಾಯಕ್ ಅನಿಲ್ ಕುಮಾರ್ ಜಾಣ ನವೀನ್ ಕುಮಾರ್ ಜೋಗಿ ಹನುಮಂತ ಕನಕಪ್ಪ, ಸಂದೀಪ್ ಶಿವಮೊಗ್ಗ, ಅಂಬಳಿ ರವೀಂದ್ರ ಇದ್ದರು.