ಭಾವಚಿತ್ರ ಹಾಕಿದ ಮಾತ್ರಕ್ಕೆ ಟಿಕೆಟ್ ಸಿಗುವುದಿಲ್ಲ

ಭೂಪನಗೌಡ ಪಾಟೀಲ್ ಸ್ಪಷ್ಟನೆ
ಲಿಂಗಸುಗೂರು.ಜ.೧೬-ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ಭಾವಚಿತ್ರ ಬಳಸಿದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ ಎಂಬುದು ಸರಿಯಲ್ಲ. ತಮ್ಮ ಭಾವಚಿತ್ರ ಹಾಕಿಕೊಂಡ ಮಾತ್ರಕ್ಕೆ ಟಿಕೆಟ್ ಸಿಗುವುದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್ಲ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಕಾಂಕ್ಷಿ ಅಭ್ಯರ್ಥಿ ಸಂಕ್ರಾಂತಿ ಶುಭಾಶಯ ಬ್ಯಾನರ ಗಳಲ್ಲಿ ತಮ್ಮ ಭಾವಚಿತ್ರ ಹಾಕಿರೋದು ಅವರಿಗೆ ಬಿಟ್ಟ ವಿಚಾರ. ಮೂರು ದಶಕಗಳಿಂದ ಕಾಂಗ್ರೆಸ್ ಗೆದ್ದಿರಲಿಲ್ಲ. ಶಾಸಕ ಹೂಲಗೇರಿ ಗೆಲವು ನಮ್ಮಲ್ಲಿ ಹುರುಪು ತುಂಬಿದೆ. ಈ ಬಾರಿಯು ಅವರಿಗೆ ಟಿಕೆಟ್ ಸಿಗುವುದು ಖಚಿತ ಎಂದು ಹೇಳಿದರು.
ತಾವು ಹೈಕಮಾಂಡ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಹೂಲಗೇರಿಗೆ ಟಿಕೆಟ್ ನೀಡಿದರೆ ಗೆಲವು ಖಚಿತ. ಅನಿವಾರ್ಯ ಕಾರಣದಿಂದ ಅಭ್ಯರ್ಥಿ ಬದಲಾವಣೆ ಬಯಸಿದಲ್ಲಿ ಪಾಮಯ್ಯ ಮುರಾರಿ ಅವರಿಗೆ ಟಿಕೆಟ್ ನೀಡಲು ಹೇಳಿರುವೆ. ಈರ್ವರನ್ನು ಬಿಟ್ಟರೆ ಬೇರೆಯವರ ಹೆಸರು ಹೇಳಿಲ್ಲ. ಹೇಳುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಿಂದ ಮೂಲ ಅಸ್ಪೃಶ್ಯರಿಗೆ ಅನ್ಯಾಯ ಆಗಿಲ್ಲ. ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಭಾರಿ ಎಚ್.ಬಿ ಮುರಾರಿ, ವಸಂತಕುಮಾರ ಹನುಮಂತಪ್ಪ ಆಲ್ಕೋಡ ಸೇರಿದಂತೆ ಇತರರು ಆಕಾಂಕ್ಷಿಗಳಾಗಿದ್ದಾರೆ. ನೂರಕ್ಕೆ ೯೫ ರಷ್ಟು ಶಾಸಕ ಡಿ.ಎಸ್ ಹೂಲಗೇರಿ ಅವರಿಗೆ ಟಿಕೆಟ್ ಸಿಗಲಿದೆ. ಗೆಲವು ಕೂಡ ನಿಶ್ಚಿತ. ಕಾರ್ಯಕರ್ತರಲ್ಲಿ ಗೊಂದಲ ಬೇಡ ಎಂದು ಮನವಿ ಮಾಡಿದರು.
ಭಾವಚಿತ್ರ ದುರ್ಬಳಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದು ಕಾಂಗ್ರೆಸ್ ಆ ಬಗ್ಗೆ ಏನು ಹೇಳಲಾರೆ. ನಮ್ಮ ನಿಲುವು ಹೂಲಗೇರಿ ಪರ. ಹೈಕಮಾಂಡ್ ತೀರ್ಮಾನ ಪಾಲನೆ ಅನಿವಾರ್ಯ ಎಂದು ಹಾರಿಕೆ ಉತ್ತರ ನೀಡಿದರು.
ರುದ್ರಯ್ಯ ಇವರು ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿ ಆದರೆ ಪಕ್ಷದ ಹೈಕಮಾಂಡ್ ಮುಂದಿನ ಚುನಾವಣೆಯಲ್ಲಿ ಅಸ್ಪುಶ್ಯರಿಗೆ ಪ್ರಾತಿನಿದ್ಯ ನೀಡಿದರೆ ಪಕ್ಷಕ್ಕಾಗಿ ದುಡಿಯಲು ಮುಂದಾಗುತ್ತದೆ ಅದಕ್ಕಾಗಿ ನಾನು ಅವರಿಗೆ ನನ್ನ ಫೋಟೋ ಬಳಸಿಕೊಂಡು ಮತದಾರರಿಗೆ ತಪ್ಪು ಸಂದೇಶವನ್ನು ಕೊಡುವುದು ನಿಲ್ಲಿಸಿ ಎಂದು ಪರೋಕ್ಷವಾಗಿ ಆರ್ ರುದ್ರಯ್ಯ ಇವರಿಗೆ ಟಾಂಗ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಪುರಸಭೆ ಉಪಾಧ್ಯಕ್ಷ ಎಂಡಿ ರಫೀ ಪರಿಶಿಷ್ಟ ಜಾತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ರುದ್ರಪ್ಪ ಭ್ಯಾಗಿ ಇವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.