ಭಾಲ್ಕಿ ಹಸಿರು ಪಟ್ಟಣ ಅಭಿಯಾನಕ್ಕೆ ಶಾಸಕ ಈಶ್ವರ ಖಂಡ್ರೆ ಚಾಲನೆ

ಭಾಲ್ಕಿ :ನ.11: ಈ ವರ್ಷ ಪಟ್ಟಣದಲ್ಲಿ 50 ಸಾವಿರ ಸಸಿಗಳನ್ನು ನೆಡೆವ ಗುರಿ ಹೊಂದಲಾಗಿದೆ ಭಾಲ್ಕಿ ಹಸಿರು ಪಟ್ಟಣ ಮಾಡಲಾಗುವುದೆಂದು ಶಾಸಕ ಈಶ್ವರ್ ಖಂಡ್ರೆ ಸಸಿ ನೆಡೆವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಸ್ವಚ್ಛ ಸುಂದರವಾಗಿ ಇರಬೇಕಾದರೆ ಗಾಳಿ ಬಹಳ ಮುಖ್ಯ, ಅನೇಕ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಆರೋಗ್ಯವೇ ಭಾಗ್ಯ ಅದಕ್ಕಾಗಿ ಪ್ರತಿಯೊಬ್ಬರು ಗಿಡ ಮರಗಳನ್ನು ಬೆಳೆಸಿ ಸಂರಕ್ಷಿಸಬೇಕು, ಪರಿಸರ ಸ್ನೇಹಿ ಗಳಾಗಬೇಕು, ಪ್ರತಿಯೊಬ್ಬರ ಹೊಣೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಶಾರದಾ ಪಬ್ಲಿಕ್ ಶಾಲೆಯ ಮಕ್ಕಳು, ಮತ್ತು ವಸಂತ ಪಾಟೀಲ್ ಇದ್ದರು.