ಭಾಲ್ಕಿ ಸಾರ್ವಜನಿಕ ಆಸ್ಪತ್ರೆಗೆ.`ವೈಕುಂಠ ರಥ’ ದೇಣಿಗೆ

ಭಾಲ್ಕಿ:ಎ.29: ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ ನೇತೃತ್ವದಲ್ಲಿ ಶಾಸಕ ಈಶ್ವರ ಖಂಡ್ರೆಯವರು ದೇಣಿಗೆ ರೂಪದಲ್ಲಿ ನೀಡಿದ `ವೈಕುಂಠ ರಥ’ದ ಬೀಗದ ಕೈ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಬ್ದುಲ್ ಖಾದರ್ ಅವರಿಗೆ ನೀಡಲಾಯಿತು.

ಬಳಿಕ ಮಾತನಾಡಿದ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ,ಶಾಸಕ ಈಶ್ವರ ಖಂಡ್ರೆ ಅವರು ಕ್ಷೇತ್ರದ ಜನ ಕಲ್ಯಾಣಕ್ಕಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ.ಕಳೆದ ಸಾಲಿನಲ್ಲಿ ಆರಂಭವಾದ ಮಾಹಾಮಾರಿ ಕೊರೊನಾದಿಂದ ಆರ್ಥಿಕವಾಗಿ ತೊಂದರೆಯಲ್ಲಿದ್ದವರಿಗೆ ಆಹಾರ ಕಿಟ್,ಹಣ್ಣು,ತರಕಾರಿ,ಸ್ಯಾನಿಟೈಸರ್,ಮಾಸ್ಕ್ ವಿತರಿಸಿ ಮಾನವೀಯತೆ ಮೆರೆದರು.ಈಗಲೂ ಕೋವಿಡ್‍ಗೆ ಬಲಿಯಾದವರ ಮೃತ ದೇಹ ತೆಗೆದುಕೊಂಡು ಹೋಗಲು `ವೈಕುಂಠ ರಥ’ ಆಸ್ಪತ್ರೆಗೆ ಶಾಶ್ವತವಾಗಿ ಸಮರ್ಪಣ ಮಾಡಿದ್ದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿಜಯಕುಮಾರ ರಾಜಭವನ,ಮುಖಂಡರಾದ ಪ್ರಕಾಶ ಮಾಶಟ್ಟೆ,ಅಶೋಕ ವಾಲೆ,ತಾಲೂಕು ಆರೋಗ್ಯಧಿಕಾರಿ ಡಾ.ಜ್ಞಾನೇಶ್ವರ ನಿರಗೂಡೆ,ವೈದ್ಯರಾದ ಡಾ.ವಿಲಾಸ ಕನಸೆ,ಡಾ.ರವಿ ಕಲಶೆಟ್ಟೆ,ಸಿಬ್ಬಂದಿ ಸುನೀಲ ಇತರರಿದ್ದರು.