ಭಾಲ್ಕಿ ಮತ್ತೊಮ್ಮೆ ಕೈ ಹಿಡಿದ ಮತದಾರರು

ಭಾಲ್ಕಿ:ಮೇ.14: ಭಾಲ್ಕಿ ಕ್ಷೇತ್ರದ ಶಾಸಕರಾಗಿ ನಿರೀಕ್ಷೆಯಂತೆ ಈಶ್ವರ ಖಂಡ್ರೆ ಅವರು ಪುನರ್ ಆಯ್ಕೆಯಾಗಿದ್ದಾರೆ. ಆ ಮೂಲಕ ಸತತ ನಾಲ್ಕನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತು. ಹಾಗಾಗಿ ಕಳೆದು ಎರಡು ತಿಂಗಳಿನಿಂದ ಚುನಾವಣೆ ಕಾವು ತೀವ್ರಗೊಂಡಿತು.
ಕಾಂಗ್ರೆಸ್ ಪರ ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ಪಿ.ಜಿ.ಆರ್.ಸಿಂಧ್ಯಾ ಬ್ಯಾಟಿಂಗ್ ಮಾಡಿದರೇ, ಬಿಜೆಪಿ ಪರ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರದ ಮಂತ್ರಿಗಳಾದ ಭಗವಂತ ಖೂಬಾ, ರಾಮದಾಸ ಅಠವಾಳೆ, ಎಸ್ಟಿ ಸಮುದಾಯದ ನಾಯಕ ಕೆ.ಎಸ್.ಈಶ್ವರಪ್ಪ ಭರ್ಜರಿ ಪ್ರಚಾರ ನಡೆಸಿದರು.
ಹಾಗಾಗಿ ಈ ಚುನಾವಣೆಯಲ್ಲಿ ಯಾರು ಗೆಲ್ಲಲ್ಲಿದ್ದಾರೆ. ಯಾರಿಗೆ ಸೋಲು ಆಗಲಿದೆ ಎನ್ನುವುದು ಕೊನೆ ವರೆಗೂ ಊಹಿಸುವುದು ಕಷ್ಟವಾಗಿತ್ತು. ತೀರ್ಪು ಹೊರ ಬಿದ್ದಿದ್ದು ಮತದಾರರು ಮತ್ತೊಮ್ಮೆ ಕೈ ಹಿಡಿದಿದ್ದಾರೆ.
ಜನರ ಪ್ರೀತಿ, ವಿಶ್ವಾಸ ಮರೆಯುವುದಿಲ್ಲ
ಕ್ಷೇತ್ರದ ಜನರು ಸತತ ನಾಲ್ಕನೆಯ ಬಾರಿಗೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ ಅವರು ತೋರಿರುವ ಪ್ರೀತಿ, ವಿಶ್ವಾಸ ಎಂದಿಗೂ ಮರೆಯುವುದಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮುಂಬರುವ ದಿನಗಳಲ್ಲಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನನ್ನನ್ನು ಐತಿಹಾಸಿಕವಾಗಿ ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆಗಳು ಸಲ್ಲಿಸುತ್ತೇನೆ.