ಭಾಲ್ಕಿ: ನೂತನ ಅಧ್ಯಕ್ಷರಾಗಿ ಜಯರಾಜ ದಾಬಶಟ್ಟಿ ಆಯ್ಕೆ

ಬೀದರ್:ಜೂ.19: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಭಾಲ್ಕಿ ತಾಲೂಕಿನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಜಯರಾಜ ದಾಬಶೆಟ್ಟಿ ಆಯ್ಕೆಯಾಗಿದ್ದಾರೆ.

ಭಾನುವಾರ ಅಲ್ಲಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನೂತನ ತಾಲೂಕು ಅಧ್ಯಕ್ಷರ ನೇಮಕ ಪ್ರಕ್ರಿಯ ನಡೆಯಿತು.

ಅಲ್ಲಿಯ ಹಿರಿಯ ಪತ್ರಕರ್ತ ಜಯರಾಜ ದಾಬಶೆಟ್ಟಿ ಅವರ ಹೆಸರನ್ನು ಹಿರಿಯ ಪತ್ರಕರ್ತ ಚಂದ್ರಕಾಂತ ಪಾಟೀಲ ಸೂಚಿಸಿದರೆ, ಮಾಜಿ ತಾಲೂಕು ಅಧ್ಯಕ್ಷ ಗಣಪತಿ ಬೋಚರೆ ಅನುಮೋದಿಸಿದರು.

ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಸಂಘದ ಸದಸ್ಯರಾದ ಪರಶುರಾಮ ಕರ್ಣಮ್, ಸಂತೋಷ ಬಿ.ಜಿ ಪಾಟೀಲ, ಭದ್ರೇಶ ಸ್ವಾಮಿ, ಮಲ್ಲಪ್ಪ ಹೊಸಗೊಂಡ, ಉದ್ಯಮಿ ದೇವೇಂದ್ರ ಶಂಭೂ ಸೇರಿದಂತೆ ಇತರರು ಇದ್ದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ಜಿಲ್ಲೆಯಲ್ಲಿ ಪತ್ರಕರ್ತರ ಸಂಘಟನೆ ಬಲಿಷ್ಟವಾಗಿಸಲು ಸಂಘಕ್ಕೆ ಸಮಯ ಕೊಡುವವರನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಿದೆ ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸರ್ವರನ್ನು ಸ್ವಾಗತಿಸಿದರು.