ಭಾಲ್ಕಿ ತಾಲ್ಲೂಕು ಕೋರೋನಾ ವಾರಿಯರ್ಸ್‍ಗೆ ಸನ್ಮಾನಿಸಿದ ಪ್ರಭು ಚವ್ಹಾಣ

ಬೀದರ:ಜೂ.1: ಪಶು ಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚೌವ್ಹಾಣ್ ಅವರು ಮೇ 31ರಂದು ಭಾಲ್ಕಿ ತಾಲೂಕಿಗೆ ಭೇಟಿ ನೀಡಿ, ಅಲ್ಲಿನ ಕೊರೋನ ವಾರಿಯರ್ಸ್ ಗೆ ಸನ್ಮಾನಿಸಿ, ಅವರಿಗೆ ಪೆÇ್ರೀತ್ಸಾಹ ನೀಡಿದರು.

ತಮ್ಮ ಜೀವದ ಬಗ್ಗೆ ಯೋಚಿಸದೇ, ಕೋವಿಡ್ ಸೋಂಕಿತರು ಗುಣಮುಖರಾಗಲು ಶ್ರಮಿಸಿದ ಕೊರೋನಾ ವಾರಿಯರ್ಸ್ ಆಗಿರುವ ವೈದ್ಯರು, ನರ್ಸಗಳು, ಲ್ಯಾಬ್ ಟೆಕ್ನಿಶಿಯನ, ???ಂಬುಲೆನ್ಸ್ ಚಾಲಕರು, ಸ್ವ್ಯಾಬ್ ಪರೀಕ್ಷೆ ತಜ್ಞರು ಹಾಗೂ ಸಿಬಂದಿ, ಸುರಕ್ಷತಾ ಸಿಬ್ಬಂದಿಗಳು, ಪೆÇೀಲಿಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿ ಹಾಗೂ ಗ್ರೂಪ್ ಡಿ ಸಿಬ್ಬಂದಿ ವರ್ಗದವರ ಶ್ರಮವು ನಿಜಕ್ಕೂ ಮೆಚ್ಚುವಂತದ್ದಾಗಿದೆ. ಹೀಗಾಗಿ ಅವರಿಗೆ ಪೆÇ್ರೀತ್ಸಾಹಿಸಿ, ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ತಾವು ಸನ್ಮಾನಿಸಿ, ಸಿಹಿ ನೀಡುವುದರ ಮೂಲಕ ಅವರಿಗೆ ಪ್ರೇರಣೆ ನೀಡುತ್ತಿರುವುದಾಗಿ ಸಚಿವರು ಇದೆ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಕ್ಷೇತ್ರದ ಮುಖಂಡರಾದ ಡಿ.ಕೆ.ಸಿದ್ರಾಮ, ಸಹಾಯಕ ಆಯುಕ್ತರಾದ ಭುವನೇಶ ಪಾಟೀಲ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಮಹೇಶ ಬಿರಾದಾರ,

ತಹಸೀಲ್ದಾರ ಅಣ್ಣಾರಾವ್ ಪಾಟೀಲ, ತಾಲ್ಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ದೀಪಿಕಾ ನಾಯ್ಕರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜ್ನಾನೆಶ್ವರ ನಿರಗುಡೆ, ಡಿವೈಎಸ್ಪಿ ದೇವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.