ಭಾಲ್ಕಿ ತಾಲೂಕಿನ ದುರಾಡಳಿತಕ್ಕೆ ಕೊನೆ: ಸಂಸದ ಖೂಬಾ

ಬೀದರ:ನ.6: ಭಾಲ್ಕಿ ಶಾಸಕರು ಮಾಡಿದಂತಹ ಮನೆ ಹಗರಣ ಬಯಲಿಗೆಳೆಯಬೇಕಾಗಿದೆ. ವಸತಿ ಹಗರಣ ಬಡವರ ಪರವಾಗಿ ಬಡವರಿಗೆ ನ್ಯಾಯ ಒದಗಿಸಿಕೊಡಲು ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿಯ ದುರಾಡಳಿತ ಕೊನೆ ಹಾಡಲು ನಾವು ಈ ಪ್ರಕರಣ ನಾವು ಕೈಗೆತ್ತಿಕೊಂಡಿದ್ದೇವೆ ಎಂದು ಸಂಸದ ಭಗವಂತ ಖೂಬಾ ನುಡಿದರು.
ಭಾಲ್ಕಿ ತಾಲ್ಲೂಕಿನಲ್ಲಿಯ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾದ ಸಭೆ ಉದ್ದೇಶಿಸಿ ಅವರು ಮಾತನಾಡಿದ ಅವರು, ಪರ ವಿರೋಧದ ಚರ್ಚೆಗಳು ಆಲಿಸಿ ಜಿಲ್ಲೆಯ ಮಠಾಧೀಶರು ಕೊರೋನಾ ಸಮಯದಲ್ಲಿ ಜನ ಸೇರಿಸಬಾರದು ಎಂದು ತಿಳಿಸಿದ್ದರು. ಹೀಗಾಗಿ ನಾನು ರಂಗಮಂದಿರದಲ್ಲಿ ಚರ್ಚೆ ಮಾಡೋಣ ಎಂದಿದ್ದೆ. ಎಂದರು.
ತನಿಖೆ ಆಗುವ ಸಂದರ್ಭದಲ್ಲಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಒಂದೇ ಒಂದು ಮನೆಯಲ್ಲಿ ಅವ್ಯವಹಾರ ಆದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಪ್ರತಿಪಾದಿಸಿದ್ದರು. ಆ ಮಾತು ಈಗ ಎಲ್ಲಿ ಹೋಯಿತು ? ಕೊಟ್ಟ ಮಾತಿಗೆ ನಡೆದುಕೊಳ್ಳಬೇಕಾಗಿತ್ತು. ನಿಮಗೆ ಅಧಿಕಾರಗಳ ಮೇಲೆ ಭರವಸೆ ಇಲ್ಲ. ಸರ್ಕಾರದ ಮೇಲೆ ವಿಶ್ವಾಸವಿಲ್ಲ. ನ್ಯಾಯದ ಮೇಲೆ ಗೌರವವಿಲ್ಲ ಎಂದು ಖೂಬಾ ಟೀಕಾ ಪ್ರಹಾರ ಮಾಡಿದರು.
ಮಹತ್ವದ ವಿಷಯದ ಬಗ್ಗೆ ತಾವು ಗಣೇಶ ಮೈದಾನದಲ್ಲಿ ಚರ್ಚೆ ಮಾಡೋಣ ಎನ್ನುತ್ತಿರಾ. ಇಂತಹ ಮಹತ್ವದÀ ಚರ್ಚೆಗಳು ದೊಡ್ಡ ಸಭೆಯಲ್ಲಿ ಮಾಡಲು ಸಾಧ್ಯವಾ? ನಿಮ್ಮ ನಡವಳಿಕೆ, ನಿಮ್ಮ ಹೇಳಿಕೆಗಳು ಒಂದು ಪಲಾಯನವಾದಿ ವ್ಯಕ್ತಿಯ ನಡವಳಿಕೆಯಾಗಿತ್ತು ಎಂದು ಅವರು ಪ್ರತಿಪಾದಿಸಿದರು.
ಪಕ್ಸದ ಕಾರ್ಯಕರ್ತರು, ಉಳ್ಳವರಿಗೆ ಮನೆ ಕೊಟ್ಟಿದ್ದಿರಿ. ಆದರೆ ಬಡ ಫಲಾನುಭವಿಗಳಿಗೆ ದುಡ್ಡು ಕೊಡಿಸುವಂತಹ ಕೆಲಸ ನಾನು ವಸತಿ ಸಚಿವರನ್ನು ಭೇಟಿ ಮಾಡಿ ಕೊಡಿಸಿದ್ದೇನೆ. ಭಾಲ್ಕಿ ತಾಲ್ಲೂಕಿನ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರು ನೀವಾಗಿದ್ದೀರಿ. ನಿಮ್ಮ ಮನೆಗೆ ಫಲಾನುಭವಿಗಳನ್ನು ಕರೆಯಿಸಿ ಸರ್ಕಾರಿ ಮನೆಗಳನ್ನು ಹಂಚುತ್ತೀರಾ?. ಇದು ನಿಮ್ಮ ಮನೆಯ ಆಸ್ತಿಯಾ?. ನೀವು ಬಡವರ ಮನೆಗೆ ಹೋಗಿ ಹಂಚಬೇಕು ಎಂದು ಖಂಡ್ರೆ ಅವರ ಕಾರ್ಯವೈಖರಿ ಮೂದಲಿಸಿದರು.
ಯಾರ ಮಾಲೀಕತ್ವದಲ್ಲಿದೆ ?
ಕರ್ನಾಟಕ ವೀರಶೈವ ಲಿಂಗಾಯತರ ಅಭಿವೃದ್ಧಿಯಾಗಬೇಕೆನ್ನುವುದು ಇಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಮೂಲ ಉದ್ದೇಶ. ಆದರೆ ಶಾಂತಿವರ್ಧಕ ಸೂಸೈಟಿ ಇಂದು ನಿಮ್ಮ ಹೆಸರಿಗೆ ಮಾಡಿಕೊಂಡಿದ್ದೀರಿ. ಇದು ಲಿಂಗಾಯತರು, ವೀರಶೈವರಿಗೆ ನೀವು ಮಾಡುವುದು ನ್ಯಾಯನಾ?, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪನವರು ಬೀದರ್ ರಂಗಮಂದಿರಕ್ಕೆ ಲಿಂ. ಡಾ.ಚನ್ನಬಸವ ಪಟ್ಟದ್ದೇವರು ಎಂದು ನಾಮಕರಣ ಮಾಡಿದರು. ನೀವು ಪಟ್ಟದ್ದೇವರು ಸ್ಥಾಪನೆ ಮಾಡಿದಂತಹ ಇಂಜಿನಿಯರಿಂಗ್ ಕಾಲೇಜಿಗೆ ನಿಮ್ಮ ತಂದೆಯವರ ಹೆಸರು ನಾಮಕರಣ ಮಾಡಿದ್ದಿರಾ. ನಿಮ್ಮ ತಂದೆಯವರ ಹೆಸರು ನಾಮಕರಣ ಮಾಡಿದಕ್ಕೆ ನಮ್ಮದೇನು ತಕರಾರಿಲ್ಲ. ಆದರೆ ಹೊಸ ಶಿಕ್ಷಣ ಸಂಸ್ಥೆ ಆರಂಭಿಸಿ ಬೆಳೆಸಿ ನಿಮ್ಮ ತಂದೆಯವರ ಹೆಸರು ಇಟ್ಟಿದ್ದರೆ ಒಳ್ಳೆಯದಾಗುತ್ತಿತ್ತು ಎಂದು ನುಡಿದರು.
ಎಮ್‍ಎಲ್‍ಸಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿದರು.ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ್ ಮಾತನಾಡಿ, ಈಶ್ವರ್ ಖಂಡ್ರೆ ವಿರುದ್ಧದ ಪ್ರಕರಣ ನಿಷ್ಕರ್ಷೆಯ ಹಂತಕ್ಕೆ ತಲುಪಿದೆ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್, ಮಾಜಿ ಶಾಸಕ ಮಲ್ಲಿಕಾರ್ಜುನ್ ಖೂಬಾ, ಬಿಜೆಪಿ ಮುಖಂಡರಾದ ಶಿವರಾಜ್ ಗಂದಗೆ, ಅಶೋಕ್ ಹೊಕ್ರಾಣೆ, ಬಸವರಾಜ ಆರ್ಯ ಮತ್ತು ಇನ್ನೂ ಅನೇಕರು ಉಪಸ್ಥಿತರಿದ್ದರು.