ಭಾಲ್ಕಿ ಕ್ಯಾಂಪಸ್ ಡ್ರೈವ್ ಸಂದರ್ಶನ:76 ವಿದ್ಯಾರ್ಥಿಗಳ ಆಯ್ಕೆ

ಕಲಬುರಗಿ :ನ.22: ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂಸ್ಥೆ ಭಾಲ್ಕಿ, ಡಿಪ್ಲೊಮಾ ಮತ್ತು ಬಿ.ಇ ವಿದ್ಯಾರ್ಥಿಗಳಿಗೆ ರಾಣೆ ಎಂಜಿನ್ ವಾಲ್ವ್ ಲಿಮಿಟೆಡ್ ಹೈದರಾಬಾದ್ ಕಂಪನಿ ಮತ್ತು ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಲೋಕಲ್ ಸೆಂಟರ್ ಕಲ್ಬುರ್ಗಿ ಸಹಯೋಗದೊಂದಿಗೆ ನವೆಂಬರ್ 21 ರಂದು ಕ್ಯಾಂಪಸ್ ಡ್ರೈವ್ ಸಂದರ್ಶನ ತಮ್ಮ ಕ್ಯಾಂಪಸ್‌ನಲ್ಲಿ ಆಯೋಜಿಸ ಸುಮಾರು 76 ವಿದ್ಯಾರ್ಥಿಗಳು ಆಯ್ಕೆಯಾದರು. ಡಾ. ಪ್ರಭುದೇವ್ ಎಂ.ಎಸ್., ಇಸಿ ಸದಸ್ಯ, ಬಿ, ಎಸ್, ಮೋರೆ ಅಧ್ಯಕ್ಷ ಮತ್ತು ಡಾ, ಬಾಬುರಾವ್ ಶೆರಿಕಾರ್, ಗೌರವ ಕಾರ್ಯದರ್ಶಿ, ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಲೋಕಲ್ ಸೆಂಟರ್ ಕಲ್ಬುರ್ಗಿ ವತಿಯಿಂದ ಬಿಕೆಐಟಿ ಭಾಲ್ಕಿ ಅವರ ಇಡೀ ತಂಡವನ್ನು ಅಭಿನಂದಿಸಿದರು.