ಭಾಲ್ಕಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ: 36 ರೋಗಿಗಳ ಜೀವ ಆಪಾಯದಲ್ಲಿ: ಖಂಡ್ರೆ

ಭಾಲ್ಕಿ:ಮೇ.4: ತಾಲೂಕು ಆಸ್ಪತ್ರೆಯಲ್ಲಿ ಇರುವ ಆಕ್ಸಿಜನ್ ಇಂದು ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಸಾಕಾಗಲಿದ್ದು, ಅಷ್ಟರೊಳಗೆ ಪ್ರಾಣವಾಯು ಬಾರದಿದ್ದರೆ 36 ರೋಗಿಗಳ ಪ್ರಾಣ ಅಪಾಯಕ್ಕೆ ಸಿಲುಕಲಿದೆ ಎಂದು ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಕಚೇರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಮುಖ್ಯ ಕಾರ್ಯದರ್ಶಿಗಳಿಗೆ, ಆರೋಗ್ಯ ಇಲಾಖೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು/ಖುದ್ದು ಕರೆ ಮಾಡಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ, ಚಾಮರಾಜನಗರದಂತೆ ಅನಾಹುತ ಸಂಭವಿಸಿದರೆ. ಆ ಎಲ್ಲ ಸಾವಿನ ಹೊಣೆಯನ್ನು ಮುಖ್ಯಮಂತ್ರಿ ಮತ್ತು ಸರ್ಕಾರವೇ ಹೊರಬೇಕಾಗುತ್ತದೆ. ತತ್ ಕ್ಷಣವೇ ಸ್ಪಂದಿಸಿ. ಜೀವ ಉಳಿಸುವಂತೆ ಶಾಸಕ ಖಂಡ್ರೆ ಆಗ್ರಹಿಸಿದ್ದಾರೆ.