ಭಾಲ್ಕಿಯಲ್ಲಿ ಸೇವೆಗೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ: ಆ.3:ತಾಲೂಕಿನಲ್ಲಿ ಎರಡುವರ್ಷಗಳಕಾಲ ಸೇವೆ ಸಲ್ಲಿಸಿರುವ ತೃಪ್ತಿ ನನಗಿದೆ. ಭಾಲ್ಕಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯವೆಂದು ನಾನು ತಿಳಿದಿದ್ದೇನೆ ಎಂದು ಪದೋನ್ನತಿ ಪಡೆದು ವರ್ಗವಾಗಿ ಹೋಗುತ್ತಿರುವ ಎ.ಎಸ್.ಪಿ ಪ್ರಥ್ವಿಕ ಶಂಕರ ಅಭಿಪ್ರಾಯ ಪಟ್ಟರು.

ಪಟ್ಟಣದ ಪುರಭವನದಲ್ಲಿ ಪೊಲೀಸ್ ಇಲಾಖೆ ಮತ್ತು ಪುರಸಭೆ ಕಾರ್ಯಾಲಯದ ಅವತಿಯಿಂದ ಬುಧವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪ್ರಥಮವಾಗಿ ನಾನು ಭಾಲ್ಕಿಗೆ ಸೇವೆ ಸಲ್ಲಿಸಲು ಆಗಮಿಸಿದಾಗ, ಭಾಲ್ಕಿ ಸೆನ್ಸಿಟಿವ್ ತಾಲೂಕುಇದೆ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಅಧಿಕಾರಿಗಳು ಮತ್ತು ನಮ್ಮ ಸಿಬ್ಬಂದಿಯವರು ತುಂಬಾ ಮುತುವರ್ಜಿಯಿಂದ ಕಾರ್ಯನಿರ್ವಹಿಸಿ, ನನ್ನ ಅವಧಿಯಲ್ಲಿ ಪೊಲೀಸ್ ಇಲಾಖೆಗೆ ಉತ್ತಮ ಹೆಸರು ಬರುವಂತೆ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿಯ ಸಾಮಾಜಿಕ ಮುಖಂಡರು, ಪತ್ರಿಕಾ ಮಾಧ್ಯಮದವರು ನಮ್ಮ ಕಾರ್ಯವನ್ನು ಮೆಚ್ಚಿ, ಇಲಾಖೆಗೆ ಉತ್ತಮವಾದ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತಾಡಿದ ಸಿಪಿಐ ಜಿ.ಎಸ್.ಬಿರಾದಾರ, ಎ.ಎಸ್.ಪಿ ಪ್ರಥ್ವಿಕ್ ಶಂಕರ ರವರ ಮಾರ್ಗದರ್ಶನದಿಂದ ತಾಲೂಕಿನಲ್ಲಿ ನಾವೆಲ್ಲರೂ ಉತ್ತಮವಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ಚುನಾವಣೆ ಸಂದರ್ಭದಲ್ಲಿ ಭಾಲ್ಕಿ ಕ್ಷೇತ್ರ ತುಂಬಾ ಸೆನ್‍ಸಿಟಿವ್ ಕ್ಷೇತ್ರವಾಗಿತ್ತು. ಆದರೆ ಪ್ರಥ್ವಿಕ್ ಶಂಕರ ರವರ ಮಾರ್ಗದರ್ಶನ ಎಲ್ಲಾ ಸಿಬ್ಬಂದಿಗಳ ಸಹಕಾರದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯನಿರ್ವಹಿಸಿದ್ದೇವೆ. ಇದಕ್ಕೆಲ್ಲ ನಮ್ಮ ಅಧಿಕಾರಿ ಪ್ರಥ್ವಿಕ್ ಶಂಕರ ರವರ ಸೂಕ್ತವಾದ ಮಾರ್ಗದರ್ಶನ ಮತ್ತು ಮುನ್ನೆಚ್ಚರಿಕಾ ಕ್ರಮವೇ ಕಾರಣ. ಇವರು ಎಲ್ಲೇ ಕಾರ್ಯನಿರ್ವಹಿಸುತ್ತಲಿದ್ದರೂ ಇವರ ಮುಂದಿನ ಜೀವನ ಸುಖಕರವಾಗಿ ನಡೆಯಲಿ ಎಂದು ಹೇಳಿದರು. ಪಟ್ಟಣದ ಹಿರಿಯ ಜೀವಿ ಸಿದ್ರಾಮಪ್ಪ ವಂಕೆ, ವಿಲಾಸ ಮೋರೆ ಎ.ಎಸ್.ಪಿ ಪ್ರಥ್ವೀಕ ಶಂಕರ ರವರ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ಇದೇವೇಳೆ ವಿವಿಧ ಸಂಘಟನೆಗಳು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿವಯರು ವರ್ಗವಾಗಿ ತೆರಳುತ್ತಿರುವ ಎಎಸ್‍ಪಿ ಯವರಿಗೆ ಸನ್ಮಾನಿಸಿ ಬೋಳ್ಕೊಟ್ಟರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಪುರಸಭೆ ಉಪಾಧ್ಯಕ್ಷ ಅಶೋಕ ಗಾಯಕವಾಡ, ವಿಜಯಕುಮಾರ ರಾಜಭವನ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಕಾರ್ಯದರ್ಶಿ ಗಣಪತಿ ಬೋಚರೆ, ಸದ್ಯರಾದ ವಿನಾಯಕ ಸಿಂಧೆ, ದೀಪಕ ಥಮಕೆ, ಪುರಸಭೆಯ ಸಂಗಮೇಶ ಕಾರಬಾರಿ ಉಪಸ್ಥಿತರಿದ್ದರು.

ಡಿಎಸ್‍ಪಿ ಕಚೇರಿಯ ಅಂಬ್ರೀಶ ಸ್ವಾಗತಿಸಿದರು. ದೀಪಕ.ಟಿ ನಿರೂಪಿಸಿದರು. ನಾಗಪ್ಪ ವಂದಿಸಿದರು.