ಭಾಲ್ಕಿಯಲ್ಲಿ ಸಂಭ್ರಮದ ರಂಜಾನ್ ಹಬ್ಬ ಆಚರಣೆ

ಭಾಲ್ಕಿ:ಎ.23: ಹಿಂದು ಮುಸ್ಲೀಮರ ಭಾತೃತ್ವ ಭಾವ ಬೆಳೆಸುವ ರಂ ಜಾನ್ ಹಬ್ಬವನ್ನು ಶನಿವಾರ ಸಂತಸ, ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆ 9 ಗಂಟೆಗೆ ಸಾವಿರಾರು ಮುಸ್ಲೀಂ ಬಾಂಧವರು ಈದಗಾ ಮೈದಾನದಲ್ಲಿ ನಮಾಜ ಪ್ರಾರ್ಥನೆ ಸಲ್ಲಿಸಿದರು. ನಂತರ ಹಿಂದೂ ಮಸ್ಲೀಮರು ಎನ್ನದೇ ಎಲ್ಲರೂ ಒಬ್ಬರಿಗೊಬ್ಬರೂ ಅಪ್ಪಿಕೊಳ್ಳುತ್ತಾ ಹಬ್ಬದ ಸುಭಾಷಯ ಕೋರಿದರು.
ಶಾಸಕ ಈಶ್ವರ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮುಖಂಡರಾದ ಡಿ.ಕೆ.ಸಿದ್ರಾಮ, ಜೆಡಿಸ್ ಮುಖಂಡ ರೌಫ್ ಪಟೇಲ, ಮಹಮದ್ ನಬಿ ಪೀರಸಾಬ, ಶೇಖ್ ಸಾಬೇರಮಿಯ ಪಟೇಲ ಮುಂತಾದವರು ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಮುಸ್ಲೀಂ ಬಾಂಧವರಿಗೆ ರಂ ಜಾನ್ ಹಬ್ಬದ ಸುಭಾಷಯ ಕೋರಿದರು.
ಪಟ್ಟಣದ ಮುಸ್ಲೀಂ ಬಾಂಧವರು ತಮ್ಮ ಹಿಂದೂ ಬಾಂಧವರಿಗೆ, ಮನೆಗೆ ಕರೆದು ರಂ ಜಾನ್ ಹಬ್ಬದ ಪ್ರೀತಿಯ ಭೋಜನ ಉಣಬಡಿಸುತ್ತಿರುವುದು ವಿಶೇಷ ವಾಗಿತ್ತು. ಅದರಂತೆ ತಾಲೂಕಿನ ಹಲವಾರು ಗ್ರಾಮಗಳಲ್ಲಿಯೂ ಮುಸ್ಲೀಂ ಬಾಂಧವರು ಹಿಂದೂಗಳಿಗೆ ತಮ್ಮ ಮನೆಗೆ ಭೊಜನಕ್ಕೆ ಕರೆದು ಸುರುಕುಂಬಾ ಎನ್ನುವ ವಿಶೇಷ ಸಿಹಿ ಭೋಜನ ಉಣಬಡಿಸಿದರು.